Friday, June 5, 2026
Homeತಾಜಾ ಸುದ್ದಿಸೋಮವಾರ ಪರಿಸ್ಥಿತಿ ಗಮನಿಸ ಕಾಲೇಜುಗಳ ಪುನರಾರಂಭದ ನಿರ್ಧಾರ ಮಾಡಲಾಗುವುದು- ಸಿಎಂ

ಸೋಮವಾರ ಪರಿಸ್ಥಿತಿ ಗಮನಿಸ ಕಾಲೇಜುಗಳ ಪುನರಾರಂಭದ ನಿರ್ಧಾರ ಮಾಡಲಾಗುವುದು- ಸಿಎಂ

- Advertisement -
- Advertisement -

ಬೆಂಗಳೂರು: ಫೆಬ್ರವರಿ 14 ರಂದು ನಡೆಯುವ ಬೆಳವಣಿಗೆಗಳನ್ನು ಗಮನಿಸಿ ಪಿಯು ಮತ್ತು ಪದವಿ ಕಾಲೇಜುಗಳನ್ನು ಪುನರಾರಂಭಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ (ಸಿಎಂ) ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಬೊಮ್ಮಾಯಿ, ಪ್ರಸ್ತುತ ಪರಿಸ್ಥಿತಿಯನ್ನು ಆಧರಿಸಿ ನಾವು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ನಮಗೂ ಕಾಳಜಿ ಇದೆ.

”ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಮೀಸಲಾತಿ ಮರುಪರಿಶೀಲನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶವನ್ನು ನೀಡಿದೆ. ಹೀಗಾಗಿ ಅಡ್ವೊಕೇಟ್ ಜನರಲ್ ಜತೆ ಚರ್ಚಿಸಲಾಗುವುದು,” ಎಂದರು.

ನಿಗದಿಯಂತೆ ಪರೀಕ್ಷೆಗಳು ನಡೆಯುತ್ತಿದ್ದರೂ ಫೆ.16ರವರೆಗೆ ಕಾಲೇಜುಗಳಿಗೆ ರಜೆ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆ ಶುಕ್ರವಾರ ತಿಳಿಸಿದ್ದರು. ಉನ್ನತ ಶಿಕ್ಷಣ ಇಲಾಖೆಗೆ ಸೇರಿದ ಎಲ್ಲಾ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ (ಡಿಸಿಟಿಇ) ಅಡಿಯಲ್ಲಿರುವ ಕಾಲೇಜುಗಳು ಮತ್ತು ಪ್ರಾಥಮಿಕ ಮತ್ತು ಪ್ರೌಢ ಇಲಾಖೆಯ ವ್ಯಾಪ್ತಿಗೆ ಬರುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಮುಚ್ಚುವಿಕೆಯನ್ನ ವಿಸ್ತರಿಸಲಾಗಿದೆ.

- Advertisement -

Latest News

error: Content is protected !!