Wednesday, June 3, 2026
Homeತಾಜಾ ಸುದ್ದಿಪುತ್ತೂರು: ಸೈಕಲ್ ಗೆ ರಿಕ್ಷಾ ಢಿಕ್ಕಿ- ಸೈಕಲ್ ಸವಾರ ಸಾವು

ಪುತ್ತೂರು: ಸೈಕಲ್ ಗೆ ರಿಕ್ಷಾ ಢಿಕ್ಕಿ- ಸೈಕಲ್ ಸವಾರ ಸಾವು

- Advertisement -
- Advertisement -

ಪುತ್ತೂರು: ಸೈಕಲ್ ಗೆ ರಿಕ್ಷಾ ಢಿಕ್ಕಿಯಾದ ಪರಿಣಾಮ ಸೈಕಲ್ ಸವಾರ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಪುತ್ತೂರು ನಗರದ ಹೊರವಲಯದ ಕೆಮ್ಮಿಂಜೆಯಲ್ಲಿ ಶನಿವಾರ ನಡೆದಿದೆ. ಮೃತರನ್ನು ಕೆಮ್ಮಿಂಜೆ ನಿವಾಸಿ ಚಿದಾನಂದ (47) ಎಂದು ಗುರುತಿಸಲಾಗಿದೆ.

ಇವರು ಸೈಕಲ್‍ನಲ್ಲಿ ಕೆಮ್ಮಿಂಜೆ ದೇವಸ್ಥಾನದ ಬಳಿ ಹೋಗುತ್ತಿದ್ದ ವೇಳೆ ಸೈಕಲ್ ಗೆ ಎದುರುಗಡೆಯಿಂದ ಬರುತ್ತಿದ್ದ ರಿಕ್ಷಾ ಢಿಕ್ಕಿ ಹೊಡೆದಿದೆ. ಈ ಸಂದರ್ಭ ರಸ್ತೆಗೆಸೆಯಲ್ಪಟ್ಟ ಅವರ ತಲೆ ಭಾಗಕ್ಕೆ ಗಂಭೀರ ಏಟಾಗಿತ್ತು.

ತಕ್ಷಣವೇ ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

- Advertisement -

Latest News

error: Content is protected !!