Saturday, June 6, 2026
Homeಅಪರಾಧಹಾವೇರಿ: ಮಗಳನ್ನೇ ನಿರಂತರ ಅತ್ಯಾಚಾರ ಮಾಡಿದ ತಂದೆ; ಕಾಮುಕ ಪತಿಯನ್ನು ಪೊಲೀಸರಿಗೆ ಒಪ್ಪಿಸಿದ ಪತ್ನಿ

ಹಾವೇರಿ: ಮಗಳನ್ನೇ ನಿರಂತರ ಅತ್ಯಾಚಾರ ಮಾಡಿದ ತಂದೆ; ಕಾಮುಕ ಪತಿಯನ್ನು ಪೊಲೀಸರಿಗೆ ಒಪ್ಪಿಸಿದ ಪತ್ನಿ

- Advertisement -
- Advertisement -

ಹಾವೇರಿ: ಕಾಮುಕ ತಂದೆಯೊಬ್ಬ ತನ್ನ ಪುತ್ರಿಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯವನ್ನು ಮಾಡಿರುವ ಘಟನೆ ಜಿಲ್ಲೆಯ ಹಂಸಭಾವು ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ನಡೆದಿದೆ.


 ಬಾಲಕಿಯ ತಾಯಿ ಮಗಳಿಗೆ ಪೀರಿಯಡ್ಸ್ ನಿಂತಿರುವ ಬಗ್ಗೆ ಅನುಮಾನಗೊಂಡು ವಿಚಾರಿಸುವ ಸಮಯದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ತನ್ನ ತಂದೆಯಿಂದಲೇ ನಿರಂತರವಾಗಿ ಅತ್ಯಾಚಾರಕ್ಕೆ ಒಳಗಾಗಿದ್ದೇನೆ ಎಂದು ಬಾಲಕಿ ಮೌನ ಮುರಿದಿದ್ದಾಳೆ.


 ತನ್ನ ಪತ್ನಿ ಮನೆಯಲ್ಲಿ ಇರದ ಸಂದರ್ಭದಲ್ಲಿ ನೀನು ನನ್ನ ಮಗಳಲ್ಲ ಎಂದು ಚಿತ್ರಹಿಂಸೆ ನೀಡಿ ಬಾಲಕಿಗೆ ಅತ್ಯಾಚಾರ ಮಾಡುತ್ತಿದ್ದ ಎಂದು ತಿಳಿದುಬಂದಿದ್ದು, ಬಾಲಕಿ ಹಾಗೂ ಆಕೆಯ ತಾಯಿ ಹಂಸಭಾವಿ ಠಾಣೆಗೆ ದೂರು ನೀಡಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

Latest News

error: Content is protected !!