- Advertisement -
- Advertisement -
ಪುತ್ತೂರು: ಹಿಜಾಬ್-ಕೇಸರಿ ವಿವಾದದ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಧೈರ್ಯ ಮೂಡಿಸಲು ಪೊಲೀಸರು ರಾಜ್ಯದಾದ್ಯಂತ ನಗರ ಸೇರಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕು, ಹೋಬಳಿಗಳಲ್ಲಿ ಶುಕ್ರವಾರ ಪಥ ಸಂಚಲನ ನಡೆಸಿದರು.
ಪೊಲೀಸ್ ಇಲಾಖೆ ಇದೀಗ ಸಾರ್ವಜನಿಕರಲ್ಲಿ ಧೈರ್ಯ ತುಂಬುವ ನಿಟ್ಟಿನಲ್ಲಿ ಪ್ರಮುಖ ಸ್ಥಳಗಳಲ್ಲಿ ಪಥಸಂಚಲನ ನಡೆಸುತ್ತಿದ್ದು, ಪುತ್ತೂರು ನಗರದಲ್ಲಿ ಡಿವೈಎಸ್ಪಿ ಗಾನಾ ಕುಮಾರ್ ನೇತೃತ್ವದಲ್ಲಿ ಪುತ್ತೂರಿನ ದರ್ಬೆ ವೃತ್ತದಿಂದ ಬೊಳುವಾರು ತನಕ ಪಥಸಂಚಲನ ಮಾಡಿದ ಪೊಲೀಸರು ಯಾವುದೇ ಸನ್ನಿವೇಶಕ್ಕೂ ಪೊಲೀಸರು ಸಿದ್ಧ ಎನ್ನುವುದನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿದರು.
- Advertisement -