ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ನೂತನ ಗೌರವಾಧ್ಯಕ್ಷರಾಗಿ ಸದಾಶಿವ ಶೆಟ್ಟಿ ಕನ್ಯಾನ ಇವರು ಆಯ್ಕೆಗೊಂಡಿದ್ದಾರೆ.
ಕoಕನಾಡಿ ನಾಗುರಿಯಲ್ಲಿರುವ ಹೋಟೆಲ್ ಅಟ್ಟಣಿಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಸಭೆ ನಡೆದಿದೆ. ಸದಾಶಿವ ಶೆಟ್ಟಿಯವರು ಮುಂಬೈ ಉದ್ಯಮಿ ಹೇರಂಬ ಕೆಮಿಕಲ್ಸ್ ಇಂಡಸ್ಟ್ರಿಯ ಆಡಳಿತ ನಿರ್ದೇಶಕರಾಗಿದ್ದಾರೆ. ಸಭೆಯಲ್ಲಿ ಇವರನ್ನು ಎಲ್ಲರ ಮತದಿಂದ ಆಯ್ಕೆ ಮಾಡಲಾಯಿತು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ 2005ರಲ್ಲಿ ಯಕ್ಷಗಾನ ಕಲಾವಿದರ ಅಭಿವೃದ್ಧಿಗಾಗಿ ಸ್ಥಾಪನೆಯಾದ ಸಂಸ್ಥೆ. ತನ್ನ ನಾಲ್ಕು ವರ್ಷಗಳ ನಿರಂತರ ಪಟ್ಲ ಸಂಭ್ರಮ ಕಾರ್ಯಕ್ರಮದಲ್ಲಿ ತೆಂಕು ಬಡಗು ಬಡಾ ಬಡಗು ತಿಟ್ಟಿನ ಯಕ್ಷಗಾನ ಕಲಾವಿದರಿಗ ಹಲವಾರು ರೀತಿಯಲ್ಲಿ ಸೇವೆ ಮಾಡಿದೆ. ಜೊತೆಗೆ ಕೋವಿಡ್ ಸಂದರ್ಭದಲ್ಲಿ ಕಲಾವಿದರಿಗೆ ಸುಮಾರು 75 ಲಕ್ಷ ಮೌಲ್ಯದ ದಿನಬಳಕೆ ಆಹಾರದ ಕಿಟ್ಟನ್ನು ಮತ್ತು ಸಹಾಯಧನವನ್ನು ಸಂಘದ ಪದಾಧಿಕಾರಿಗಳ ಮೂಲಕ ನೀಡಲಾಗಿದೆ. ಎಂದು ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಅವರು ತಿಳಿಸಿದರು.
ಈ ವರ್ಷ ಪ್ರತಿವರ್ಷದಂತೆ ಯಕ್ಷಗಾನ ವೃತ್ತಿ ಕಲಾವಿದರ ಕೋರಿಕೆಯಂತೆ ಕ್ರೀಡಾಕೂಟ ನಡೆಯಲಿದೆ ಹಾಗೂ ಈ ಬಾರಿ ಯಕ್ಷಗಾನ ಕಲಾವಿದರಿಗೆ ಅಲ್ಲದೆ ಇತರೆ ಕ್ಷೇತ್ರದ ಕಲಾವಿದರನ್ನು ಗುರುತಿಸಿ ಕಲಾ ಗೌರವ ಸಮರ್ಪಿಸಲಾಗುವುದು.
ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಸೌಂದರ್ಯ ರಮೇಶ್, ಜಯರಾಮ ಶೇಖ, ಸವಣೂರು ಸೀತಾರಾಮ ರೈ, ಮುಂಬೈ ಘಟಕದ ಕಾರ್ಯದರ್ಶಿ ಕರ್ನೂರು ಮೋಹನ್ ರೈ, ಕುದ್ರೋಳಿ ಗಣೇಶ್, ಯಕ್ಷಗಾನ ಕ್ಷೇತ್ರದ ಪ್ರೊ.ಡಾ. ಪ್ರಭಾಕರ ಜೋಶಿ, ಜಬ್ಬರ್ ಸುಮೋ, ಕೇಂದ್ರ ಸಮಿತಿಯ ಜಗನ್ನಾಥ ಶೆಟ್ಟಿ ಬಾಳ, ಆರತಿ ಆಳ್ವ ಉಪಸ್ಥಿತರಿದ್ದರು.