Saturday, June 6, 2026
Homeಕರಾವಳಿಉಡುಪಿಉಡುಪಿ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಲಾರಿ- ಪಕ್ಕದಲ್ಲಿದ್ದ ಹೋಟೆಲ್ ಸುಟ್ಟು ಕರಕಲು

ಉಡುಪಿ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಲಾರಿ- ಪಕ್ಕದಲ್ಲಿದ್ದ ಹೋಟೆಲ್ ಸುಟ್ಟು ಕರಕಲು

- Advertisement -
- Advertisement -

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶ್ರೀ ರಸ್ತು ಹೋಟೆಲ್ ಎದುರು ನಿನ್ನೆ ಸಂಜೆ ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ತಂತಿಯು ಎಳೆಯಲ್ಪಟ್ಟು ಹೆದ್ದಾರಿಗೆ ಅಡ್ಡಲಾಗಿ ಬಿದ್ದ ಘಟನೆ ಉಡುಪಿಯ ಉಚ್ಚಿಲದಲ್ಲಿ ನಡೆದಿದೆ.

ಇದೇ ಸಂದರ್ಭ ವಿದ್ಯುತ್ ಹರಿಯುತ್ತಿದ್ದ ತಂತಿಯೊಂದು ಗೂಡಂಗಡಿ ಹೋಟೆಲಿಗೆ ಬಿದ್ದ ಪರಿಣಾಮ ಹೋಟೆಲ್ ಹೊತ್ತಿ ಉರಿದಿದೆ. ವಿದ್ಯುತ್ ತಂತಿಯು ಹೆದ್ದಾರಿಗೆ ಅಡ್ಡಲಾಗಿ ಬಿದ್ದ ಪರಿಣಾಮ ವಾಹನ ಸಂಚಾರ ಅಸ್ಥವ್ಯಸ್ಥಗೊದಿತ್ತು.

ಈ ವೇಳೆ ಲೈನ್‌ಮಾನ್ ಸುರೇಶ್ ಆಗಮಿಸಿ ತಂತಿ ತಂಡರಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಕಾಪು ಅಪರಾಧ ವಿಭಾಗದ ಎಸ್ ಐ ತಿಮ್ಮೇಶ್ ಘಟನಾ ಸ್ಥಳದಲ್ಲಿದ್ದು, ಸೂಕ್ತ ಬಂದೋಬಸ್ತ್ ಏರ್ಪಡಿಸಿದರು.

- Advertisement -

Latest News

error: Content is protected !!