Saturday, June 6, 2026
Homeತಾಜಾ ಸುದ್ದಿಕುಮಟಾ: ಚಾಲಕನ ನಿಯಂತ್ರಣ ತಪ್ಪಿ ಅನಿಲ ತುಂಬಿದ ಟ್ಯಾಂಕರ್ ಪಲ್ಟಿ

ಕುಮಟಾ: ಚಾಲಕನ ನಿಯಂತ್ರಣ ತಪ್ಪಿ ಅನಿಲ ತುಂಬಿದ ಟ್ಯಾಂಕರ್ ಪಲ್ಟಿ

- Advertisement -
- Advertisement -

ಕುಮಟಾ: ಮಂಗಳೂರಿನಿಂದ ಬೆಳಗಾವಿ ಕಡೆ ಸಾಗಿಸುತ್ತಿದ್ದ ಅನಿಲ ತುಂಬಿದ ಟ್ಯಾಂಕರ್ ಪಲ್ಟಿಯಾದ ಘಟನೆ ಹೊನ್ನಮ್ಮ ದೇವಸ್ಥಾನದ ಬಳಿ ಇಂದು ನಡೆದಿದೆ.

ಮಂಗಳೂರಿನಿಂದ ಬೆಳಗಾವಿಗೆ ಸಾಗಿಸುತ್ತಿದ್ದಾಗ ಲಾರಿಯ ಸಂಪರ್ಕ ತಪ್ಪಿದ ಟ್ಯಾಂಕರ್ ಕೆಳಗೆ ಉರುಳಿತು. ಟ್ಯಾಂಕರ್‌ನ ಸುರಕ್ಷಿತ ವಾಲ್ಟ್ ಸಡಿಲಗೊಂಡು ಸಣ್ಣ ಪ್ರಮಾಣದಲ್ಲಿ ಅನಿಲ ಸೋರಿಕೆ ಉಂಟಾಗಿತ್ತು. ತಕ್ಷಣ ಅನಿಲ ಸೋರಿಕೆಯಾಗುವುದನ್ನು ನಿಲ್ಲಿಸಲಾಯಿತು. ಬಳಿಕ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿ ಒಳರಸ್ತೆ ಮೂಲಕ ಹೆದ್ದಾರಿ ಸಂಪರ್ಕಿಸುವಂತೆ ಕ್ರಮ ಕೈಗೊಳ್ಳಲಾಯಿತು.

ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಪಿಎಸ್‌ಐ ನವೀನ್ ನಾಯ್ಕ ಮಾಹಿತಿ ನೀಡಿದರು.

- Advertisement -

Latest News

error: Content is protected !!