Friday, June 5, 2026
HomeUncategorizedವಿಟ್ಲ: ಮನೆಗೆ ನುಗ್ಗಿ ಮಹಿಳೆಯ ಮೇಲೆ ಹಲ್ಲೆ; ಮಹಿಳೆಯಿಂದ ಠಾಣೆಗೆ ದೂರು

ವಿಟ್ಲ: ಮನೆಗೆ ನುಗ್ಗಿ ಮಹಿಳೆಯ ಮೇಲೆ ಹಲ್ಲೆ; ಮಹಿಳೆಯಿಂದ ಠಾಣೆಗೆ ದೂರು

- Advertisement -
- Advertisement -

ವಿಟ್ಲ: ಅಕ್ರಮವಾಗಿ ಮನೆಗೆ ನುಗ್ಗಿದ ತಂಡವೊoದು ಮನೆಯಲ್ಲಿದ್ದ ಮಹಿಳೆಯ ಮೈಯ ಮೇಲೆ ಕೈ ಹಾಕಿ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವುದಾಗಿ ಮಹಿಳೆಯೋರ್ವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಹೇಮಾಜೆ ನಿವಾಸಿ ಬಾಪುಕುಂಞ ಇವರ ಪತ್ನಿ ಮರಿಯಮ್ಮ ದೂರು ನೀಡಿದ್ದಾರೆ. ಸಮೀರ್ ಇಸಾಕ್ ಹಕಿಂ ಕೂರ್ನಡ್ಕ ಸಹಿತ ನಾಲ್ವರು ಪ್ರಕರಣದ ಆರೋಪಿಗಳಾಗಿದ್ದಾರೆ.


ಮರಿಯಮ್ಮ ಅವರು ಒಬ್ಬರೆ ಮನೆಯಲ್ಲಿದ್ದ ವೇಳೆ ಶಮೀರ್, ಇಸಾಕ್, ಹಕೀಂ ಮತ್ತು ಪರಿಚಯ ವಿಲ್ಲದ ಇನ್ನೊಬ್ಬ ಕಾರಿನಲ್ಲಿ ಬಂದು ಅವರ ಮನೆಯ ಹಿಂಬಾಗಿಲಿನಿoದ ಮನೆಗೆ ಒಳಗೆ ಅಕ್ರಮವಾಗಿ ಪ್ರವೇಶ ಮಾಡಿದರಲ್ಲದೆ, ಮಹಿಳೆಯ ಮೇಲೆೆ ಕೈ ಹಾಕಿ ದೊಣ್ಣೆಯಿಂದ ಹಲ್ಲೆ ಮಾಡಿ ಆಕೆಯನ್ನು ದೂಡಿ ಹಾಕಿದ್ದಾರೆ. ನಂತರ ನಮ್ಮ ವಿಚಾರಕ್ಕೆ ಬಂದರೆ ನಿಮ್ಮನ್ನು ಕೊಂದು ಹಾಕುವುದಾಗಿ ಜೀವ ಬೆದರಿಕೆ ಒಡ್ಡಿದ್ದಾರೆ. ಈ ಘಟನೆಗೆ ಆಕೆಯ ಮಗ ಹಾಗೂ ಸಮೀರ್ ಎಂಬಾತನ ಮಧ್ಯೆ ಇರುವ ದ್ವೇಷವೇ ಕಾರಣವೆಂದು ಮರಿಯಮ್ಮ ರವರು ವಿಟ್ಲ ಠಾಣೆ ಪೊಲೀಸರಿಗೆ ದೂರನ್ನು ನೀಡಿರುತ್ತಾರೆ.

ಈ ಕುರಿತು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!