Friday, June 5, 2026
Homeಕರಾವಳಿಪಣಂಬೂರು: ಮೀನುಗಾರ ಏಕಾಏಕಿ ನಾಪತ್ತೆ !

ಪಣಂಬೂರು: ಮೀನುಗಾರ ಏಕಾಏಕಿ ನಾಪತ್ತೆ !

- Advertisement -
- Advertisement -

ಮಂಗಳೂರು ನಗರದ ಪಣಂಬೂರಿನಲ್ಲಿ ಬೋಟ್‌ನಲ್ಲಿ ಮೀನು ಹಿಡಿಯಲು ಹೋದ ಯುವಕ ನಾಪತ್ತೆಯಾದ ಘಟನೆ ನಡೆದಿದೆ.

ನಾಪತ್ತೆಯಾದವರನ್ನು ನಿಲೇಶ್‌ ಎಕ್ಕಾ(32), ಎಂದು ತಿಳಿದು ಬಂದಿದೆ. ನಿಲೇಶ್, ಸ್ಯಾನ್ಸ್ ಪಿಟ್ ಬೆಂಗರೆಯಿಂದ 26 ಮಂದಿ ಜೊತೆಗೆ ಮೀನು ಹಿಡಿಯಲು ಬೋಟ್ ನಲ್ಲಿ ಹೋಗಿದ್ದರು.

ಅಳಿವೆಬಾಗಿಲು ಮೂಲಕ ಸಮುದ್ರಕ್ಕೆ ಹೋಗಿ ಸುಮಾರು 5 ಕಿ. ಮೀ. ಕ್ರಮಿಸಿದಾಗ ಬೋಟ್‌ನಲ್ಲಿದ್ದ ನೀಲೇಶ್ ಏಕಾಏಕಿ ಕಾಣಿಯಾಗಿದ್ದಾನೆ. ಕೂಡಲೇ ಬೋಟು ನಿಲ್ಲಿಸಿ ಹುಡುಕಾಡಿದಾಗ ನೀಲೇಶ್ ಪತ್ತೆಯಾಗಿಲ್ಲ.

ಈ ಬಗ್ಗೆ ಕರಾವಳಿ ಕಾವಲು ಪೊಲೀಸ್‌ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!