- Advertisement -
- Advertisement -
ಮುಂಬೈ : ವಿಶ್ವವನ್ನೇ ತನ್ನ ಕಬಂಧಬಾಹುವಿನಿಂದ ತಲ್ಲಣಿಸಿರುವ ಮಹಾಮಾರಿ ಕೊರೊನ ಸೋಂಕು ಈಗಷ್ಟೇ ಹೊರಜಗತ್ತನ್ನು ನೋಡುತ್ತಿರುವ 20 ದಿನದ ಹಸುಗೂಸುವಿಗೆ ವಕ್ಕರಿಸಿದೆ , ತನ್ನ ತಾಯಿಯಿಂದ ಸೋಂಕು ತಗುಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆ ಮಗುವಿನ ತಾಯಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಾರಾಷ್ಟ್ರದ ಮುಂಬೈ ಮಹಾನಗರದ ಹೊರ ವಲಯದಲ್ಲಿರುವ ಠಾಣೆ ಜಿಲ್ಲೆಯ ಕಲ್ಯಾಣ್ ನಗರದಲ್ಲಿ 20 ದಿನದ ಮಗುವಿಗೆ ಕೊರೊನಾ ವೈರಸ್ ತಗುಲಿರುವುದು ಖಚಿತವಾಗಿದೆ.ಕಲ್ಯಾಣ್ ಡೊಂಬಿವಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 162ಕ್ಕೆ ಏರಿಕೆಯಾಗಿದೆ. ಇದರಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ಅಧಿಕಾರಿ ಡಾ ರಾಜು ಲೊವಾಂಗರೆ ಮಾಹಿತಿ ನೀಡಿದ್ದಾರೆ.
- Advertisement -