ಬೆಂಗಳೂರು: ಸ್ಯಾಂಡಲ್‍ವುಡ್ ರಾಕಿಂಗ್ ಕಪಲ್ ಮನೆಗೆ ಜೂನಿಯರ್ ಯಶ್ ಆಗಮಿಸಿ ಇಂದಿಗೆ ಆರು ತಿಂಗಳು ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಯಶ್ ಮತ್ತು ರಾಧಿಕಾ ಅಭಿಮಾನಿಗಳಿಗೆ ಜೂನಿಯರ್ ರಾಜಾಹುಲಿಯ ದರ್ಶನ ಮಾಡಿಸಿದ್ದಾರೆ.
ಯಶ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಪುತ್ರನನ್ನು ನೋಡಲು ಸಾಕಷ್ಟು ಕುತೂಹಲದಿಂದ ಕಾಯುತ್ತಿದ್ದರು. ಇದೀಗ ರಾಧಿಕಾ ಪಂಡಿತ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಮೊದಲ ಬಾರಿಗೆ ತಮ್ಮ ಪುತ್ರನ ಫೋಟೋವನ್ನು ರಿವೀಲ್ ಮಾಡಿದ್ದಾರೆ. ಜೊತೆಗೆ ಜೂನಿಯರ್ ಯಶ್‍ಗೆ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದ ಬೇಕು ಎಂದು ಬರೆದುಕೊಂಡಿದ್ದಾರೆ.
ಯಶ್ ದಂಪತಿ ಮಕ್ಕಳ ಫೋಟೋವನ್ನು ರಿವೀಲ್ ಮಾಡಲು ಬಹಳ ಚ್ಯೂಸಿಯಾಗಿರುತ್ತಾರೆ. ಈ ಹಿಂದೆ ಮಗಳ ಫೋಟೋವನ್ನು ಕೂಡ ಬಹಳ ದಿನಗಳ ಬಳಿಕ ರಿವೀಲ್ ಮಾಡಿದ್ದರು. ಇದೇ ರೀತಿ ಜೂನಿಯರ್ ಫೋಟೋ ಕೂಡ ರಿವೀಲ್ ಮಾಡಿದ್ದಾರೆ.
ಕಳೆದ ದಿನವೇ ಈ ಕುರಿತು ತಮ್ಮ ಇನ್‍ಸ್ಟಾದಲ್ಲಿ ಫೋಟೋ ಶೇರ್ ಮಾಡಿ ಮಾಹಿತಿ ನೀಡಿದ್ದ ರಾಧಿಕಾ ಪಂಡಿತ್ ಅವರು, “ನೀವು ಕಾಯುತ್ತಿದ್ದ ಆ ಕ್ಷಣ ಬಂದಿದೆ. ಇಂದಿಗೆ ಜೂನಿಯರ್ ಯಶ್‍ಗೆ 6 ತಿಂಗಳು ಪೂರ್ಣಗೊಳ್ಳಿದ್ದು, ನಿಮಗೆ ಶುಭಾಶಯ ತಿಳಿಸಲು ಆತ ಸಿದ್ಧನಾಗಿದ್ದು, ನೀವು ಸಿದ್ಧರಾಗಿ” ಎಂದು ತಿಳಿಸಿದ್ದರು.