Friday, June 5, 2026
Homeಕರಾವಳಿಉಡುಪಿಉಡುಪಿ: ಗಂಡನ ಮಾನಸಿಕ ಹಾಗೂ ದೈಹಿಕ ಕಿರುಕುಳ ತಾಳಲಾರದೇ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ...

ಉಡುಪಿ: ಗಂಡನ ಮಾನಸಿಕ ಹಾಗೂ ದೈಹಿಕ ಕಿರುಕುಳ ತಾಳಲಾರದೇ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ…!

- Advertisement -
- Advertisement -

ಉಡುಪಿ: ಗಂಡನ ಮಾನಸಿಕ ಹಾಗೂ ದೈಹಿಕ ಕಿರುಕುಳ ತಾಳಲಾರದೇ ಮಹಿಳೆಯೊಬ್ಬರು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉಡುಪಿಯ ಕಾಪು ತಾಲೂಕಿನ ನಡ್ಸಾಲು ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಪ್ರಮೀಳಾ (40) ಎಂದು ಗುರುತಿಸಲಾಗಿದೆ.

ಪ್ರಮೀಳಾ ಎಂಬುವವರನ್ನು 15 ವರ್ಷಗಳ ಹಿಂದೆ ಭಾಸ್ಕರ ಶೆಟ್ಟಿ ಎಂಬವರಿಗೆ ಮದುವೆ ಮಾಡಿ ಕೊಡಲಾಗಿತ್ತು ಮದುವೆಯಾದ ದಿನದಿಂದ ಗಂಡ ಭಾಸ್ಕರ ಶೆಟ್ಟಿ ಪತ್ನಿಯ ಬಗ್ಗೆ ಅನುಮಾನಪಡುತ್ತಾ ಕೈಗಳಿಂದ ಹೊಡೆದು, ಕಾಲುಗಳಿಂದ ತುಳಿದು ದೈಹಿಕವಾಗಿ ಹಿಂಸಿಸುತ್ತಿದ್ದರು.

ಇದರಿಂದ ಬೇಸತ್ತ ಪ್ರಮೀಳಾ ಡಿ.27ರಂದು ಸಂಜೆ 6:30 ಗಂಟೆಗೆ ಮನೆಯಲ್ಲಿ ತಂದಿರಿಸಿದ ನಿದಮಾತ್ರೆಯನ್ನು ಸೇವಿಸಿ, ಅಸ್ವಸ್ಥಗೊಂಡಿದ್ದಾರೆ. ಇದನ್ನು ಗಮನಿಸಿದ ತಾಯಿ ಅಸ್ವಸ್ಥಗೊಂಡ ಪ್ರಮೀಳಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!