Thursday, June 4, 2026
Homeಕರಾವಳಿಉಡುಪಿಬೈಂದೂರು: ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ !

ಬೈಂದೂರು: ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ !

- Advertisement -
- Advertisement -

ಬೈಂದೂರು: ಮಹಿಳೆಯೊಬ್ಬರ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ಉಪ್ಪುಂದದಲ್ಲಿ ನಡೆದಿದೆ.

ಈ ಕುರಿತು ಜ್ಯೋತಿ ಹಿಣಿ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಜ್ಯೋತಿ ಅವರ ಮನೆಯ ಟಾಯ್ಲೆಟ್ ಫಿಟ್ಟಿನ ಹೊಂಡ ) ಮೇಲಿರುವ ಹಾಸು ಕಲ್ಲನ್ನು ನೆರೆ ಮನೆಯ ಮಹೇಂದ್ರ ಖಾರ್ವಿ ಎಂಬಾತ ಸುತ್ತಿಗೆಯಿಂದ ಒಡೆಯುತ್ತಿರುವಾಗ ಯಾಕೆ ಟಾಯ್ಲೆಟ್ ಫಿಟ್ ಒಡೆಯುತ್ತಿಯಾ ಎಂದು ಕೇಳಿದ್ದಾರೆ. ಈ ವೇಳೆ ಮಹೇಂದ್ರ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಅದಲ್ಲದೆ ಟಾಯ್ಲೆಟ್ ಹೊಂಡವನ್ನು ಮುಚ್ಚಲು ಒಂದು ಲಾರಿಯಲ್ಲಿ ಮಣ್ಣನ್ನು ತರಿಸಿದ್ದ ಈ ವೇಳೆ ಜ್ಯೋತಿ ಅವರು ಲಾರಿ ಚಾಲಕನನ್ನು ಅಲ್ಲಿಂದ ವಾಪಾಸ್ಸು ಕಳುಹಿಸಿದ್ದಾರೆ.

ಇದರಿಂದ ಸಿಟ್ಟಾದ ಮಹೇಂದ್ರ ಜ್ಯೋತಿ ಅವರ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುತ್ತಾನೆ. ಇದೇ ವೇಳೆ ಚಂದು ಎಂಬಾತ ಕೂಡಾ ಹಲ್ಲೆಗೆ ಪ್ರಚೋದನೆ ನೀಡಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!