Sunday, June 7, 2026
Homeಕರಾವಳಿಸುಳ್ಯ: ತೇಗದ ಮರವನ್ನು ಕಡಿದು ಸಂಗ್ರಹಿಸಿಟ್ಟ ವ್ಯಕ್ತಿಯ ಬಂಧನ !

ಸುಳ್ಯ: ತೇಗದ ಮರವನ್ನು ಕಡಿದು ಸಂಗ್ರಹಿಸಿಟ್ಟ ವ್ಯಕ್ತಿಯ ಬಂಧನ !

- Advertisement -
- Advertisement -

ಸುಳ್ಯ: ಸಂಪಾಜೆ ಅರಣ್ಯಾಧಿಕಾರಿಗಳು ತೇಗದ ಮರವನ್ನು ಕಡಿದು ಸಂಗ್ರಹಿಸಿಟ್ಟ ಸುಳ್ಯ ತಾಲೂಕು ಚೆಂಬು ಗ್ರಾಮದ ಊರುಬೈಲು ಧರ್ಮಪಾಲದ ಆರೋಪಿಯೊಬ್ಬರನ್ನು ಬಂಧಿಸಿದ್ದಾರೆ.

ಸಂಪಾಜೆ ಪ್ರಾದೇಶಿಕ ವಲಯ ವ್ಯಾಪ್ತಿಯ ಪಬ್ಬಿಪ್ಯಾಬ್ ಮೀಸಲು ಅರಣ್ಯದಿಂದ ತೇಗದ ಮರವನ್ನು ಕಡಿದು ಸಂಗ್ರಹಿಸಿಟ್ಟಿದ್ದಾರೆಂದು ಆರೋಪಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಮಡಿಕೇರಿ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ , ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೊಸಿನ್ ಪಾಷಾ , ವಲಯಾರಣ್ಯಾಧಿಕಾರಿ ಮಧುಸೂದನ ಎಂ.ಕೆ.ರವರ ಮಾರ್ಗದರ್ಶನದಲ್ಲಿ ಉಪ ವಲಯಾರಣ್ಯಾಧಿಕಾರಿ ವಿಜೇಂದ್ರ ಕುಮಾರ್ , ಅರಣ್ಯ ರಕ್ಷಕರಾದ ಜಯರಾಮ , ಮನೋಹರ , ವಾಹನ ಚಾಲಕ ಭರತ್ ಕೇನಾಜೆ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದರು. ಆರೋಪಿಗಳನ್ನು ಬಂಧಿಸಿ ತೇಗದ ಮರಗಳನ್ನು ವಶಪಡಿಸಿಕೊಳ್ಳಲಾಗಿದೆ.

- Advertisement -

Latest News

error: Content is protected !!