Sunday, June 7, 2026
Homeಕರಾವಳಿಉಡುಪಿಉಡುಪಿ: ಸಮುದ್ರ ತೀರದಲ್ಲಿದ್ದ ಒಂಟಿ ಮಹಿಳೆಯ ರಕ್ಷಣೆ !

ಉಡುಪಿ: ಸಮುದ್ರ ತೀರದಲ್ಲಿದ್ದ ಒಂಟಿ ಮಹಿಳೆಯ ರಕ್ಷಣೆ !

- Advertisement -
- Advertisement -

ಉಡುಪಿ: ಮಲ್ಪೆಯ ಗುಜ್ಜರ್ ಬೆಟ್ಟುವಿನಲ್ಲಿ ಒಂಟಿ ಮಹಿಳೆಯೊಬ್ಬರು ಸಮುದ್ರ ತೀರದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಇರುವುದನ್ನು ಕಂಡ ಸ್ಥಳೀಯ ಮಹಿಳೆಯೊಬ್ಬರು ವಿಶುಶೆಟ್ಟಿಯವರಿಗೆ ಮಾಹಿತಿ ನೀಡಿದ್ದು ಕೂಡಲೇ ವಿಶು ಶೆಟ್ಟಿಯವರು ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು ವಶಕ್ಕೆ ಪಡೆದು ನಿಟ್ಟೂರಿನ ಸಖಿ ಸೆಂಟರ್ ಗೆ ದಾಖಲಿಸಿದ ಘಟನೆ ನಡೆದಿದೆ.

ಮಹಿಳೆಯು ಮಳೆಯಾಳಿಯಲ್ಲಿ ಮಾತನಾಡುತಿದ್ದು ಹೆಸರು ಬೇಬಿ 55 ವರ್ಷ ಎಂದಷ್ಟೇ ಮಾಹಿತಿ ನೀಡಿದ್ದಾರೆ. ಮಹಿಳೆಯು ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಸ್ಥಳೀಯ ಪಂಚಾಯತ್ ಸದಸ್ಯ ಪುರಂದರ ಕುಂದರ್ ಹಾಗೂ ಸ್ಥಳೀಯರು ಸಹಕರಿಸಿದ್ದಾರೆ. ವಿಶು ಶೆಟ್ಟಿಯವರು ವಿಷಯ ತಿಳಿದ ಕೂಡಲೆ ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು ರಕ್ಷಿಸಿದ ಬಗ್ಗೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ

- Advertisement -

Latest News

error: Content is protected !!