ಮಂಗಳೂರಿನಲ್ಲಿ ಏಕಾಏಕಿ ಎರಡು ಶಿಕ್ಷಣ ಸಂಸ್ಥೆಗಳ ಕೋವಿಡ್‌ನ ಎರಡು ಕ್ಲಸ್ಟರ್ ಗಳಲ್ಲಿ ಐವರಲ್ಲಿ ಒಮಿಕ್ರಾನ್ ದೃಢ ಪಟ್ಟಿದೆ.
ಈ ಕುರಿತು ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಕ್ಲಸ್ಟರ್ 1 ರಲ್ಲಿ ಪರೀಕ್ಷೆಗೊಳಗಾದ 14 ಪ್ರಕರಣಗಳಲ್ಲಿ 4 ಮಂದಿಗೆ ಒಮಿಕ್ರಾನ್ ದೃಢ, ಕ್ಲಸ್ಟರ್ 2 ರಲ್ಲಿ ಪರೀಕ್ಷೆಗೆ ಒಳಗಾದ 19 ಪ್ರಕರಣಗಳಲ್ಲಿ 1 ಒಮಿಕ್ರಾನ್ ದೃಢ ಪಟ್ಟಿದೆ ಎಂದು ಮಾಹಿತಿ ಲಭ್ಯವಾಗಿದೆ.
ಹಾಗೇ ರಾಜ್ಯಕ್ಕೆ ಯುಕೆಯಿಂದ ಬಂದಿಳಿದ ಒಬ್ಬ ಪ್ರಯಾಣಿಕನಲ್ಲೂ ಒಮಿಕ್ರಾನ್ ದೃಢ ಪಟ್ಟಿದೆ ಎಂದು ಸಚಿವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
16 ಕೋವಿಡ್ ಪ್ರಕರಣಗಳು ಮೊದಲ ಕ್ಲಸ್ಟರ್ ನಲ್ಲಿ
ವರದಿಯಾಗಿದ್ದವು, ಜಿನೋಮಿಕ್ ಪರೀಕ್ಷೆಗಾಗಿ ಮಾದರಿಗಳನ್ನು ಡಿಸೆಂಬರ್ 10 ರಂದು ಕಳುಹಿಸಲಾಗಿತ್ತು, ಇಂದು ನಾಲ್ವರಿಗೆ ಒಮಿಕ್ರಾನ್ ಪಾಸಿಟಿವ್ ಎಂದು ಉಲ್ಲೇಖಿಸಿದ ವರದಿಯನ್ನು ಸ್ವೀಕರಿಸಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಹಾಗೇ ಎಲ್ಲಾ ವಿದ್ಯಾರ್ಥಿಗಳನ್ನು ಇಂದು ತಪಾಸಣೆ ಮಾಡಲಾಗಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.


