ಉಪ್ಪಿನಂಗಡಿಯಲ್ಲಿ ಠಾಣೆ ಮುಂಭಾಗ ನಡೆದ ಪ್ರತಿಭಟನೆಯ ವೇಳೆ 10 ಮಂದಿ ಪಿಎಫೈ ಕಾರ್ಯಕರ್ತರು ಇಬ್ಬರು ಮಹಿಳಾ ಪೊಲೀಸರ ಮೇಲೆ ಹಲ್ಲೆ ನಡೆಸಿ ಸಮವಸ್ತ್ರ ಹರಿದು ಮಾನಭಂಗಕ್ಕೆ ಯತ್ನಿಸಿ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಹಮ್ಮದ್ ತಾಹೀರ್, ಸ್ನಾಧಿಕ್, ಅಬ್ದುಲ್ ಮುಬಾರಕ್, ಅಬುಲ್ ಶರೀನ್, ಮೊಹಮ್ಮದ್ ಜಾಹಿರ್, ಸುಜೀರ್ ಮಹಮ್ಮದ್ ಪೈಜಲ್, ಮೊಹಮ್ಮದ್ ಹನೀಫ್, ಎನ್ ಕಾಸಿಂ, ಮೊಹಮ್ಮದ್ ಆಸಿಫ್ ಹಾಗೂ ತುಪೈಲ್ ಮಹಮ್ಮದ್ ಕೆ ಕೃತ್ಯ ಎಸಗಿದ ಆರೋಪಿಗಳು ಎಂದು ದೂರಿನಲ್ಲಿ ಹೆಸರಿಸಲಾಗಿದೆ.
ಆರೋಪಿಗಳ ವಿರುದ್ಧ ಪಿಸಿ ಕಲಂ 1860 (U/s-143,147,151,341,354,332,353,427,307,269,270,149) ಹಾಗೂ ಕರ್ನಾಟಕ ಆಸ್ತಿ ಹಾನಿ ತಡೆ ಮತ್ತು ನಷ್ಟ ಕಾಯ್ದೆ 1981(KARNATAKA PREVENTION OF DISTRUCTION & LOSS OF PROPERTY ACT 1981) (U/s-2(A)) ರಂತೆ ಪ್ರಕರಣ ದಾಖಲಾಗಿದೆ.
ಈ ಆರೋಪಿಗಳು ಉಪ್ಪಿನಂಗಡಿಯ ಠಾಣೆಯ ಮುಂಭಾಗ ಅಕ್ರಮ ಕೂಟ ರಚಿಸಿ ಠಾಣೆಗೆ ಕಲ್ಲು ಬಿಸಾಡಿ ಠಾಣೆಯ ಮುಂಭಾಗದ ಗಾಜುಗಳನ್ನು ಪುಡಿ ಮಾಡಿದ್ದಾರೆ ಹಾಗೂ ಠಾಣೆ ಎದುರು ನಿಲ್ಲಿಸಿದ ಇಲಾಖಾ ವಾಹನಗಳನ್ನು ಜಖಂಗೊಳಿಸಿ ಹಾನಿಗೊಳಿಸಿ ಸರ್ಕಾರಿ ಸೊತ್ತುಗಳಿಗೆ ನಷ್ಟವುಂಟು ಮಾಡಿದ್ದಾರೆಂದು ಉಪ್ಪಿನಂಗಡಿ ಪಿಎಸೈ ಓಮನ ಎನ್ ಕೆ ರವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ