Thursday, June 4, 2026
Homeಅಪರಾಧಕುಂದಾಪುರ: ಷೇರು ವ್ಯವಹಾರ- 83 ಲಕ್ಷ ರೂ. ಕಳೆದುಕೊಂಡ ಮಹಿಳೆ

ಕುಂದಾಪುರ: ಷೇರು ವ್ಯವಹಾರ- 83 ಲಕ್ಷ ರೂ. ಕಳೆದುಕೊಂಡ ಮಹಿಳೆ

- Advertisement -
- Advertisement -

ಕುಂದಾಪುರ: ಗಾಂಧಿಪಾರ್ಕ್ ಬಳಿಯ ಬೇಳೂರು ಶಾನುಭಾಗ್ ಕಾಂಪೌಂಡ್ ನ ಬಿ. ಸುಮತಿ ಅವರು ಖಾರ್ವಿ ಷೇರ್ಸ್ ಬ್ರೋಕರೇಜ್ ಲಿಮಿಟೆಡ್ ಸಂಸ್ಥೆ ಮೂಲಕ ಖರೀದಿಸಿದ್ದ ಷೇರನ್ನು ಸಂಸ್ಥೆಯ ನಿರ್ದೇಶಕರು ಡ್ರಾ ಮಾಡಿ 83 ಲಕ್ಷ ರೂ. ವಂಚಿಸಿದ ಪ್ರಕರಣ ಕುಂದಾಪುರ ಠಾಣೆಯಲ್ಲಿ ದಾಖಲಾಗಿದೆ.

ಸುಮತಿ ಅವರು ಪುತ್ರ ಬಿ.ವಾಸುದೇವ ಶಾನುಬಾಗ್ ಅವರನ್ನು ನಾಮಿನಿ ಮಾಡಿ 4,167 ಷೇರು ಗಳನ್ನು ಖರೀದಿಸಿದ್ದರು. 2004 ರಲ್ಲಿ ಸುಮತಿ ಮೃತಪಟ್ಟಿದ್ದು ಅನಂತರದ ದಿನಗಳಲ್ಲಿ ಪರಿಶೀಲಿಸಿದಾಗ ಅವರ ಡಿ ಮ್ಯಾಟ್ ಅಕೌಂಟ್ ನಲ್ಲಿ ಹಣ ಇರಲಿಲ್ಲ ಪತ್ರ ವ್ಯವಹಾರಕ್ಕೂ ಉತ್ತರಿಸಿದ ಸಂಸ್ಥೆಯ ನಿರ್ದೇಶಕ ವಾಸುದೇವ್ ಶಾನುಭೋಗ್ ಅವರಿಗೆ ತಿಳಿಸದೇ ಅವರ ತಾಯಿಯ ಷೇರಿನಲ್ಲಿದ್ದ 83,90,005 ರೂ ಅವರ ಸ್ವಂತಕ್ಕೆ ಉಪಯೋಗಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಪೊಲೀಸ್ ತನಿಖೆ ಮುಂದುವರಿದಿದೆ.

- Advertisement -

Latest News

error: Content is protected !!