Saturday, June 6, 2026
Homeಕರಾವಳಿಉಡುಪಿಶಿರೂರು ಟೋಲ್ ಗೇಟ್ ಗೆ ಗುದ್ದಿದ ಕಾರು, ಟೋಲ್ ಸಿಬ್ಬಂದಿ ಸಾವು !

ಶಿರೂರು ಟೋಲ್ ಗೇಟ್ ಗೆ ಗುದ್ದಿದ ಕಾರು, ಟೋಲ್ ಸಿಬ್ಬಂದಿ ಸಾವು !

- Advertisement -
- Advertisement -

ಶಿರೂರು: ಇಂದು ಶೀರೂರು ಟೋಲ್ ಗೇಟ್ ಬಳಿ ವೇಗವಾಗಿ ಬಂದ ಕಾರು ಟೋಲ್ ಗೇಟ್ ಮುಂಭಾಗದ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಅಲ್ಲೇ ಇದ್ದ ಟೋಲ್ ಸಿಬ್ಬಂದಿಯೊಬ್ಬರು ಗಂಭೀರ ಗಾಯಗೊಂಡು ಮೃತಪತ್ತಿದ್ದಾರೆ.

ಟೋಲ್ ಸಿಬಂದಿ ರಾಘವೇಂದ್ರ ಮೇಸ್ತ (44) ಮೃತಪಟ್ಟವರು ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ರಾಘವೇಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಲಾಯಿತು ಆದರೆ ಆಸ್ಪತ್ರೆಗೆ ಸಾಗುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ.

ಘಟನೆ ಬಳಿಕ ಟೋಲ್ ಗೇಟ್ ನಿರ್ಲಕ್ಷ ಕುರಿತು ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ರಾತ್ರಿ ಘಟನೆ ನಡೆದರು ಬೆಳಿಗ್ಗೆ ತನಕ ಸಂಬಂಧಿಸಿದ ಅಧಿಕಾರಿಗಳು ಬಂದಿಲ್ಲ. ಸೂಕ್ತ ಪರಿಹಾರ ನೀಡಿ ಕ್ರಮಕೈಗೊಳ್ಳದಿದ್ದರೆ ಟೋಲ್ ಗೇಟ್ ಎದುರು ಶವ ಇಟ್ಟು ಪ್ರತಿಭಟಿಸಲಾಗುವುದು ಸ್ಥಳೀಯರು ಎಚ್ಚರಿಕೆ ನೀಡಿದ್ದರು.

- Advertisement -

Latest News

error: Content is protected !!