Saturday, June 13, 2026
Homeಕರಾವಳಿಕುಂದಾಪುರ: ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಪರಿಚಿತ ವ್ಯಕ್ತಿಯಿಂದಲೇ ಮಹಿಳೆಯ ಕಿವಿಯೋಲೆ ಕಳ್ಳತನ !

ಕುಂದಾಪುರ: ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಪರಿಚಿತ ವ್ಯಕ್ತಿಯಿಂದಲೇ ಮಹಿಳೆಯ ಕಿವಿಯೋಲೆ ಕಳ್ಳತನ !

- Advertisement -
- Advertisement -

ಕುಂದಾಪುರ: ಪರಿಚಿತ ವ್ಯಕ್ತಿಯೇ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಚಿನ್ನದ ಬೆಂಡೋಲೆಯನ್ನು ಸುಲಿಗೆ ಮಾಡಿರುವ ಘಟನೆ ಬನ್ನೂರು ಗ್ರಾಮದ ನಿವೇದಿತ ಶಾಲೆಯ ಬಳಿ ನಡೆದಿದೆ.

ಕರಿಯಮ್ಮ ಅವರು , ಮೀನು ತರಲೆಂದು ಬಸೂರು ಗ್ರಾಮದ ನಿವೇದಿತ ಶಾಲೆಯ ಬಳಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅವರ ಪರಿಚಯದ ಆರೋಪಿ ಮಧುಕರ ಮೊಗವೀರ ಎಂಬಾತ ಹಿಂದಿನಿಂದ ಬಂದು ಅವರನ್ನು ನೆಲಕ್ಕೆ ದೂಡಿ ಮುಖಕ್ಕೆ ಗುದ್ದಿ ಎಡ ಕಿವಿಯಲ್ಲಿ ಧರಿಸಿದ ಚಿನ್ನದ ಬೆಂಡೋಲೆಯನ್ನು ಕಿವಿಯಿಂದ ಹರಿದು ಪರಾರಿಯಾಗಿದ್ದಾನೆ.

ಆರೋಪಿ ಕದ್ದುಕೊಂಡು ಹೋದ ಚಿನ್ನದ ಬೆಂಡೋಲೆ ಮೌಲ್ಯ 12000 ರೂ ಈ ಬಗ್ಗೆ ಬಸೂರ ಗ್ರಾಮದ ಬಾಳೆ ಹಿತ್ತು ಸಮೀಪದ ಕರಿಯಮ್ಮ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

- Advertisement -

Latest News

error: Content is protected !!