Tuesday, May 14, 2024
Homeಕರಾವಳಿಉಡುಪಿಮಣಿಪಾಲ: ಮನೆ ಬೀಗ ಮುರಿದು ನಗ ನಗದು ಕಳವುಗೈದ ಖದೀಮರು !

ಮಣಿಪಾಲ: ಮನೆ ಬೀಗ ಮುರಿದು ನಗ ನಗದು ಕಳವುಗೈದ ಖದೀಮರು !

spot_img
- Advertisement -
- Advertisement -

ಮಣಿಪಾಲ: ಶಿವಳ್ಳಿ ಗ್ರಾಮದ , ಇಂದ್ರಾಳಿಯ ಗೋಡನ್ ರಸ್ತೆಯಲ್ಲಿರುವ ಮನೆಗೆ ನುಗ್ಗಿದ ಕಳ್ಳರು ನಗ – ನಗದು ಕಳವು ಮಾಡಿರುವ ಘಟನೆ ನಡೆದಿದೆ.

ಈ ಕುರಿತು ಶ್ರೀಶೈಲಪ್ಪ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ , ಶ್ರೀಶೈಲಪ್ಪ ಅವರು ವಾಸವಿದ್ದ ರತಿ ಶೆಟ್ಟಿ ಎಂಬುವವರ ಬಾಡಿಗೆ ಮನೆಯ ಬಾಗಿಲಿನ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಮನೆಯ ಕೋಣೆಯಲ್ಲಿದ್ದ ಟ್ರಂಕ್ ನ ಬೀಗ ಮುರಿದು ಚಿನ್ನದ ಒಡವೆಗಳನ್ನು ಮತ್ತು ಪರ್ಸ್ ನಲ್ಲಿ ಇಟ್ಟಿದ್ದ 25,000 ರೂ ನಗದನ್ನು ಕಳವು ಗೈದಿದ್ದಾರೆ.

ಕಳವಾದ ಸೊತ್ತುಗಳ ಒಟ್ಟು ಮೌಲ್ಯ 71,500 ರೂ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!