Thursday, June 4, 2026
Homeಕರಾವಳಿಪುತ್ತೂರು: ನಾಪತ್ತೆಯಾದ ವ್ಯಕ್ತಿ ಪಕ್ಕದ ಮನೆಯ ಟ್ಯಾಂಕ್ ನಲ್ಲಿ ಶವವಾಗಿ ಪತ್ತೆ

ಪುತ್ತೂರು: ನಾಪತ್ತೆಯಾದ ವ್ಯಕ್ತಿ ಪಕ್ಕದ ಮನೆಯ ಟ್ಯಾಂಕ್ ನಲ್ಲಿ ಶವವಾಗಿ ಪತ್ತೆ

- Advertisement -
- Advertisement -

ಪುತ್ತೂರು: ಮನೆಯಲ್ಲಿ ತಾನು ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದ ವ್ಯಕ್ತಿ ನಾಪತ್ತೆಯಾದ ಘಟನೆ ಎರಡು ದಿನಗಳ ಹಿಂದೆ ನಡೆದಿತ್ತು. ವ್ಯಕ್ತಿಯನ್ನು ಸವಣೂರು ಗ್ರಾಮದ ಉರುಸಾಗು ನಿವಾಸಿ ರಾಮಯ್ಯ ಪೂಜಾರಿ ಎಂದು ಗುರುತಿಸಲಾಗಿದೆ

ರಾಮಯ್ಯ ಪೂಜಾರಿ ಅವರು ಎರಡು ದಿನಗಳ ಹಿಂದೆ ಸವಣೂರು ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮತ್ತೆ ಮನೆಗೆ ಹಿಂತಿರುಗಿ ಬಾರದೇ ಇದ್ದು, ಮನೆಯವರು ಎಲ್ಲಾ ಕಡೆ ಹುಡುಕಾಟ ನಡೆಸುತ್ತಿದ್ದಾಗ ನಿನ್ನೆ ಪಕ್ಕದ ಮನೆಯ ಟ್ಯಾಂಕ್ ನಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದ್ದು, ಹೆಚ್ಚಿನ ಮಾಹಿತಿ ತನಿಖೆ ನಂತರವಷ್ಟೇ ತಿಳಿಯಬೇಕಿದೆ. ಮೃತದೇಹವನ್ನು ಹಿಂದೂ ಜಾಗರಣ ವೇದಿಕೆ ಆಂಬ್ಯುಲೆನ್ ಮೂಲಕ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯಲಾಗಿದೆ.

- Advertisement -

Latest News

error: Content is protected !!