Saturday, June 6, 2026
Homeಅಪರಾಧಮಂಗಳೂರು: ಮೊಬೈಲ್ ರಿಚಾರ್ಜ್ ಅಪ್ಡೇಟ್ ಮಾಡಲು ಹೋಗಿ 99,900 ಕಳೆದುಕೊಂಡ ವ್ಯಕ್ತಿ

ಮಂಗಳೂರು: ಮೊಬೈಲ್ ರಿಚಾರ್ಜ್ ಅಪ್ಡೇಟ್ ಮಾಡಲು ಹೋಗಿ 99,900 ಕಳೆದುಕೊಂಡ ವ್ಯಕ್ತಿ

- Advertisement -
- Advertisement -

ಮಂಗಳೂರು:ಮೊಬೈಲ್ ರಿಚಾರ್ಜ್ ಅಪ್ಡೇಟ್ ಮಾಡಲು Any desk app ಡೌನ್ ಲೋಡ್ ಮಾಡಿ 99,900 ರೂ. ಕಳೆದುಕೊಂಡಿರುವ ಘಟನೆ ನಡೆದಿದೆ. ವ್ಯಕ್ತಿಯೋರ್ವರು ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವ್ಯಕ್ತಿಯೊಬ್ಬ 7908256272 ಸಂಖ್ಯೆಯಿಂದ ಕರೆ ಮಾಡಿ ಹಿಂದಿ ಬಾಷೆಯಲ್ಲಿ ಮಾತನಾಡಿ ಬಿಎಸ್ಸೆನ್ನೆಲ್ ಕಚೇರಿಯಿಂದ ಮಾತ್ನಾಡುವುದಾಗಿ ಹೇಳಿ ಮೊಬೈಲ್ ರೀಚಾರ್ಜ್ ಅಪ್ ಡೇಟ್ ಮಾಡಲು Anydesk app ಡೌನ್ ಲೋಡ್ ಮಾಡುವಂತೆ ತಿಳಿಸಿದ್ದ.

ದೂರುದಾರರು ಆಪ್ ಡೌನ್ ಲೋಡ್ ಮಾಡಿದಾಗ ವೆಬ್ ಪೆಜ್ ತೆರೆದುಕೊಂಡಿತ್ತು. ಕರೆ ಮಾಡಿದ ವ್ಯಕ್ತಿಯೂ ಸಿವಿವಿ ನಂಬರ್ ಹಾಕಲು ತಿಳಿಸಿದ್ದ. ಅದರಂತೆ ಅವರು ಸಿವಿವಿ ನಂಬರ್ ಹಾಕಿದ್ದರು ಕೂಡಲೇ ಅವರ ಖಾತೆಯಿಂದ 99,900 ರೂ. ವರ್ಗಾವಣೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

- Advertisement -

Latest News

error: Content is protected !!