Thursday, July 3, 2025
Homeಕರಾವಳಿಸುರತ್ಕಲ್‌ನಲ್ಲಿ ಎಸ್‌ಬಿಐ ಎಟಿಎಂ ಧ್ವಂಸಗೊಳಿಸಿದ ವ್ಯಕ್ತಿ, ಅಪಾರ ನಷ್ಟ...!

ಸುರತ್ಕಲ್‌ನಲ್ಲಿ ಎಸ್‌ಬಿಐ ಎಟಿಎಂ ಧ್ವಂಸಗೊಳಿಸಿದ ವ್ಯಕ್ತಿ, ಅಪಾರ ನಷ್ಟ…!

spot_img
- Advertisement -
- Advertisement -

ಸುರತ್ಕಲ್‌ನ ಎಂಆರ್‌ಪಿಎಲ್‌ ರಸ್ತೆಯ ಕಟ್ಲಾ ರಸ್ತೆ ತಿರುವಿನ ಬಳಿ ಇರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಎಟಿಎಂ ಧ್ವಂಸ ಮಾಡಿದ ವ್ಯಕ್ತಿಯೊಬ್ಬರು ಅಲ್ಲಿದ್ದ ವಸ್ತುಗಳನ್ನು ಕೆಡವಿದ್ದಾರೆ.

ಎಟಿಎಂ ಒಳಗೆ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ವ್ಯಕ್ತಿ ವಸ್ತುಗಳನ್ನು ಒಡೆಯುತ್ತಿರುವ ದೃಶ್ಯ ಕಂಡು ಬಂದಿದೆ. ಈ ಘಟನೆ ಎಟಿಎಂ ಕಟ್ಟಡದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ವರ್ಷ ಸೆ.9ರಂದು ಎಟಿಎಂನ ಗಾಜಿನ ಗೋಡೆ ಒಡೆದಿದ್ದು, ಈ ಬಾರಿ ಮತ್ತೆ ಹೆಲ್ಮೆಟ್‌ನಿಂದ ಒಡೆದಿದ್ದಾರೆ. ಎಟಿಎಂ ಯಂತ್ರ ಕೆಳಗೆ ಬಿದ್ದಿದೆ, ಹವಾನಿಯಂತ್ರಕ, ಗಾಜಿನ ಗೋಡೆ ಮತ್ತು ಇತರ ಸೊತ್ತುಗಳಿಗೆ ಸಮಗ್ರ ಹಾನಿಯಾಗಿದೆ.

ಈ ವರ್ಷದ ಸೆಪ್ಟೆಂಬರ್ 9 ರಂದು ಈ ಎಟಿಎಂನ ಗಾಜಿನ ಗೋಡೆ ಒಡೆದ ಬಗ್ಗೆ ಬ್ಯಾಂಕ್ ನೀಡಿದ ದೂರಿಗೆ ಸಂಬಂಧಿಸಿದಂತೆ, ಪೊಲೀಸರು ಸ್ಥಳೀಯ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ಮಾನಸಿಕ ಅಸ್ವಸ್ಥನಾಗಿದ್ದು, ಚಿಕಿತ್ಸೆಗೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ. ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ಚಿತ್ರಗಳನ್ನು ನೋಡಿದಾಗ, ಅದೇ ವ್ಯಕ್ತಿ ಮತ್ತೆ ನಷ್ಟವನ್ನುಂಟುಮಾಡಿದ್ದಾನೆ ಎಂದು ಹೇಳಲಾಗಿದೆ.

ಕಟ್ಟಡದ ಮಾಲೀಕ ಸತೀಶ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಇಂದು ಅಧಿಕೃತ ದೂರು ದಾಖಲಿಸುವ ಸಾಧ್ಯತೆಯಿದೆ. ಈ ಘಟನೆಯಲ್ಲಿ ಬ್ಯಾಂಕ್ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದೆ.

- Advertisement -
spot_img

Latest News

error: Content is protected !!