Monday, June 8, 2026
Homeಕರಾವಳಿಜಾಲ್ಸೂರು: ಕಸ ಎಸೆದವರ ಕೈಯಲ್ಲೇ ಕಸ ವಿಲೇವಾರಿ ಮಾಡಿಸಿ ದಂಡ !

ಜಾಲ್ಸೂರು: ಕಸ ಎಸೆದವರ ಕೈಯಲ್ಲೇ ಕಸ ವಿಲೇವಾರಿ ಮಾಡಿಸಿ ದಂಡ !

- Advertisement -
- Advertisement -

ಜಾಲ್ಸೂರು ಗ್ರಾಮದ ಬೈತಡ್ಕ ತಿರುವಿನಲ್ಲಿ ರಸ್ತೆ ಬದಿ ತ್ಯಾಜ್ಯ ಎಸೆಯುತ್ತಿದ್ದ ಇಬ್ಬರ ಕುರಿತು ಸ್ಥಳೀಯರು ಗ್ರಾ. ಪಂ. ಗೆ ಮಾಹಿತಿ ನೀಡಿದ್ದರು. ಇವರಿಗೆ ಗ್ರಾ. ಪಂ ವತಿಯಿಂದ ದಂಡ ವಿಧಿಸಿ, ಎಸೆದ ತ್ಯಾಜ್ಯವನ್ನು ಅವರಿಂದಲೇ ವಿಲೇವಾರಿ ಮಾಡಿಸಿದ ಘಟನೆ ನಡೆದಿದೆ.

ಬೈಕ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಬೈತಡ್ಕ ತಿರುವಿನಲ್ಲಿ ಬೈಕ್ ನಿಲ್ಲಿಸಿ ತ್ಯಾಜ್ಯ ಎಸೆಯುತ್ತಿರುವುದ್ದರು. ಗ್ರಾ. ಪಂ. ಪ್ರಭಾರ ಅಭಿವೃದ್ಧಿ ಅಧಿಕಾರಿ ಕೆ. ಪಿ. ಸುಬ್ಬಯ್ಯ ಅವರು ತಕ್ಷಣ ಬೈತಡ್ಕಕ್ಕೆ ಬಂದಾಗ ಸ್ಥಳೀಯರು ಸೇರಿ ತ್ಯಾಜ್ಯ ಎಸೆದವರನ್ನು ಹಿಡಿದು ನಿಲ್ಲಿಸಿದ್ದಾರೆ ಎನ್ನಲಾಗಿದೆ.

ದಂಡ ವಿಧಿಸಿ, ಕಸ ಅವರಿಂದಲೇ ಹೆಕ್ಕಿಸಿ, ಇನ್ನು ಮುಂದೆ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯದಂತೆ ಸೂಚನೆ ನೀಡಿ ಕಳುಹಿಸಲಾಯಿತು

- Advertisement -

Latest News

error: Content is protected !!