Friday, June 5, 2026
Homeಅಪರಾಧಕಟಪಾಡಿ: ಶಿರ್ವ ಸಂಪರ್ಕ ರಸ್ತೆಯ ಅಂಗಡಿಗಳಿಗೆ ಕಳ್ಳರು ನುಗ್ಗಿ ಸರಣಿ ಕಳ್ಳತನ...!

ಕಟಪಾಡಿ: ಶಿರ್ವ ಸಂಪರ್ಕ ರಸ್ತೆಯ ಅಂಗಡಿಗಳಿಗೆ ಕಳ್ಳರು ನುಗ್ಗಿ ಸರಣಿ ಕಳ್ಳತನ…!

- Advertisement -
- Advertisement -

ಕಟಪಾಡಿ: ಕಟಪಾಡಿ ಪೊಲೀಸ್ ಹೊರ ಠಾಣೆ ಬಳಿ ಶಿರ್ವ ಸಂಪರ್ಕ ರಸ್ತೆಯ ಅಂಗಡಿಗಳಿಗೆ ಕಳ್ಳರು ನುಗ್ಗಿ ಸರಣಿ ಕಳ್ಳತನ ನಡೆದ ಘಟನೆ ಬೆಳಕಿಗೆ ಬಂದಿದೆ. ಮಾಡಿನ ಹಂಚು ತೆಗೆದು ಒಳ ಪ್ರವೇಶಿದ ಕಳ್ಳರು ಬೇಕರಿ, ಮೆಡಿಕಲ್ ಶಾಪ್, ಫರ್ನಿಚರ್ ಅಂಗಡಿ, ದಿನಸಿ ಅಂಗಡಿ ಸಹಿತ ಇತರ ಅಂಗಡಿಗಳಲ್ಲೂ ಕಳವು ಮಾಡಿದ್ದಾರೆ.

ಸಿ ಸಿ ಕ್ಯಾಮರ, ಡಿ ವಿ ಆರ್, ನಗದು ಸಹಿತ ಇತರೆ ಸೊತ್ತುಗಳು ಕಳವುಗೈಯಲಾಗಿದೆ ಎಂದು ಅಂಗಡಿ ಮಾಲಕರು ತಿಳಿಸಿದ್ದಾರೆ.

ಕಾಪು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿ ಸಾಕಷ್ಟು ಸಾಕ್ಷ್ಯ ಸಂಗ್ರಹಿಸಿದ್ದು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

- Advertisement -

Latest News

error: Content is protected !!