Friday, June 5, 2026
Homeಕರಾವಳಿಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಕೃಷಿ ಸಾಹಸದ ಕುರಿತು ಕೃಷಿ-ಖುಷಿ ಅಧ್ಯಯನ ಕಾರ್ಯಕ್ರಮ...

ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಕೃಷಿ ಸಾಹಸದ ಕುರಿತು ಕೃಷಿ-ಖುಷಿ ಅಧ್ಯಯನ ಕಾರ್ಯಕ್ರಮ !

- Advertisement -
- Advertisement -

ಬಂಟ್ವಾಳ: ಬಂಟ್ವಾಳ ತಾಲೂಕಿನ 5 ಸರಕಾರಿ ಶಾಲೆಗಳ ಸುಮಾರು 40 ವಿದ್ಯಾರ್ಥಿಗಳನ್ನೊಳಗೊಂಡ ಶಿಕ್ಷಣ ಇಲಾಖೆಯ ನಿಯೋಗ ಇಂದು ಗಂಜಿಮಠದಲ್ಲಿರುವ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಒಡ್ಡೂರು ಫಾರ್ಮ್ಸ್ಗೆ ಭೇಟಿ ನೀಡಿದರು. ಇಲ್ಲಿ ಶಾಸಕರ ಕೃಷಿ ಸಾಹಸದ ಕುರಿತು ಕೃಷಿ-ಖುಷಿ ಕಾರ್ಯಕ್ರಮದ ಅಧ್ಯಯನ ನಡೆಸಿದರು.

ನಂತರ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ಕೃಷಿಯಲ್ಲಿ ನಾವು ವರ್ಷದ ಕೆಲವೇ ತಿಂಗಳು ದುಡಿದರೂ ನಮಗೆ ನೆಮ್ಮದಿಯ ಜೀವನ ಸಿಗುತ್ತದೆ. ಇಂತಹ ನೆಮ್ಮದಿ ಯಾವ ಉದ್ಯಮದಲ್ಲೂ ಸಿಗಲು ಸಾಧ್ಯವಿಲ್ಲ. ಇಲ್ಲಿ ನಮ್ಮ ಪರಿಶ್ರಮವೇ ಮುಖ್ಯವಾಗಿದ್ದು, ಬರಡು ಭೂಮಿಯಲ್ಲೂ ಈಗ ಬಂಗಾರದ ಬೆಳೆ ತೆಗೆಯುತ್ತಿದ್ದೇನೆ. ಹೈನುಗಾರಿಕೆ, ಸಾವಯವ ಕೃಷಿಕಯ ಕುರಿತು ತಿಳಿಸಿದರು.

ಬಂಟ್ವಾಳ ಕ್ಷೇತ್ರ ಶಿಕ್ಷಣಾಧಕಾರಿ ಜ್ಞಾನೇಶ್ ಮಾತನಾಡಿ, ರಾಷ್ಟೀಯ ಶಿಕ್ಷಣ ನೀತಿಯಲ್ಲಿ ಅನುಭವಾತ್ಮಕ ಕಲಿಕೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಆಸಕ್ತಿಯ ವಿಚಾರದಲ್ಲಿ ಅಧ್ಯಯನ ನಡೆಸಬಹುದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೂಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಪ್ರೊಬೆಷನರಿ ಪಿಎಸ್‌ಐ ರಾಮಕೃಷ್ಣ, ಶಿಕ್ಷಣ ಸಂಯೋಜಕಿ ಸುಜಾತಕುಮಾರಿ, ಸಂಪನ್ಮೂಲ ವ್ಯಕ್ತಿಗಳಾದ ಮಂಜು ವಿಟ್ಲ, ಮೌನೇಶ್ ವಿಶ್ವಕರ್ಮ ಹಲವಾರು ಶಾಲೆಗಳ ಶಿಕ್ಷಕರು ಮತ್ತಿತರರು ಉಪಸ್ಥಿತರಿದ್ದರು. ಸಂದೀಪ್ ಸಾಲ್ಯಾನ್ ಸ್ವಾಗತಿಸಿ, ಹರೀಶ್ ಮಾಂಬಾಡಿ ವಂದಿಸಿದರು.

- Advertisement -

Latest News

error: Content is protected !!