Friday, June 5, 2026
Homeಕರಾವಳಿಧರ್ಮಸ್ಥಳ: ದೇವರ ದರುಶನಕ್ಕೆಂದು ಬಂದ ಯಾತ್ರಾರ್ಥಿಯೊಬ್ಬರು ಅಸ್ವಸ್ಥ, ಆಸ್ಪತ್ರೆಯಲ್ಲಿ ಸಾವು !

ಧರ್ಮಸ್ಥಳ: ದೇವರ ದರುಶನಕ್ಕೆಂದು ಬಂದ ಯಾತ್ರಾರ್ಥಿಯೊಬ್ಬರು ಅಸ್ವಸ್ಥ, ಆಸ್ಪತ್ರೆಯಲ್ಲಿ ಸಾವು !

- Advertisement -
- Advertisement -

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪ್ರತಿನಿತ್ಯ ಸಾವಿರಾರು, ಲಕ್ಷಾಂತರ ಭಕ್ತರು ಬರುತ್ತಾರೆ. ಹಾಗೇ ದೇವರ ದರುಶನಕ್ಕೆ ಎಂದುಬಂದ ಅಪರಿಚಿತ ಯಾತ್ರಾರ್ಥಿಯೊಬ್ಬರು ಧರ್ಮಸ್ಥಳದ ಕ್ಯೂ ಕಾಂಪ್ಲೆಕ್ಸ್ ಬಳಿ ಅಸೌಖ್ಯದಿಂದ ಬಳಲುತ್ತಿದ್ದರು.

ಇದನ್ನು ಕಂಡ ಸ್ಥಳೀಯರು ಆತನನ್ನು ಚಿಕಿತ್ಸೆಗಾಗಿ ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ, ಚಿಕಿತ್ಸೆಗೆ ಸ್ಪಂದಿಸದೆ ಆ ವ್ಯಕ್ತಿಯು ಮೃತಪಟ್ಟ ಘಟನೆ ನಡೆದಿದೆ.

ಅಂದಾಜು 40 ವರ್ಷ ಪ್ರಾಯದ ಈ ಅಪರಿಚಿತ ವ್ಯಕ್ತಿಯ ಮೃತ ಶರೀರವು ಮಂಗಳೂರು ಜಿಲ್ಲಾ ವೆನ್ ಲಾಕ್ ಆಸ್ಪತ್ರೆಯ ಶವಾಗಾರದಲ್ಲಿದ್ದು, ವಾರಸುದಾರರಿಗೆ ಹುಡುಕಾಟ ನಡೆಸುತ್ತಿದ್ದಾರೆ. ಎಲ್ಲಿಯವರು, ಯಾರು ಎಂದು ತಿಳಿದು ಬಾರದ ಕಾರಣ ಈತನ ಕುಟುಂಬಸ್ಥರನ್ನು ಹುಡುಕಲು ಕಷ್ಟವಾಗಿದೆ.

- Advertisement -

Latest News

error: Content is protected !!