Wednesday, June 3, 2026
Homeಆರಾಧನಾಉಜಿರೆ: ಲಕ್ಷದೀಪೋತ್ಸವ ಅಂಗವಾಗಿ ಪಾದಯಾತ್ರೆ ಸಮಾಲೋಚನೆ ಸಭೆ !

ಉಜಿರೆ: ಲಕ್ಷದೀಪೋತ್ಸವ ಅಂಗವಾಗಿ ಪಾದಯಾತ್ರೆ ಸಮಾಲೋಚನೆ ಸಭೆ !

- Advertisement -
- Advertisement -

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವದ ಪ್ರಯುಕ್ತ ಪ್ರತೀ ವರ್ಷದಂತೆ 9ನೇ ವರ್ಷದ ಪಾದಯಾತ್ರೆ ಸಮಾಲೋಚನಾ ಸಭೆಯು ಉಜಿರೆ ಶ್ರೀ ಜನಾರ್ಧನ ದೇವಸ್ಥಾನದಲ್ಲಿ ನಡೆಯಿತು.


ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನ.29 ರಂದು ಸಾಯಂಕಾಲ 3.೦೦ ಗಂಟೆಗೆ ಪಾದಯಾತ್ರೆಯ ಮೂಲಕ ಧರ್ಮಸ್ಥಳ ತಲುಪಿ ಅಲ್ಲಿಂದ ಶ್ರೀ ಮಂಜುನಾಥ ಸ್ವಾಮಿ ದೇವರ ದರ್ಶನವವನ್ನು ಪಡೆದು ಬಳಿಕ ಧರ್ಮಾಧಿಕಾರಿಗಳಾದ ಡಾ| ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಅವರ ಆಶೀರ್ವಾದವನ್ನು ಪಡೆಯಲಾಗುವುದು ಮತ್ತು ಎಲ್ಲಾ ಜಾತಿ, ಮತ, ಪಂಥದವರು ಪಾದಯಾತ್ರೆಯಲ್ಲಿ ಭಾಗವಿಸುವಂತೆ ಸಭೆಯಲ್ಲಿ ಹೇಳಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಜನಾರ್ಧನ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯರವರು ವಹಿಸಿದ್ದರು. ಜೊತೆಗೆ ಶಾಸಕ ಹರೀಶ್ ಪೂಂಜಾ, ವಿಧಾನಪರಿಷತ್ ಶಾಸಕರಾದ ಕೆ. ಹರೀಶ್ ಕುಮಾರ್, ಕೆ. ಪ್ರತಾಪ್ ಸಿಂಹ ನಾಯಕ್, ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಡಾ.ಎಲ್.ಎಚ್.ಮಂಜುನಾಥ್, ಉಜಿರೆ ಲಕ್ಷ್ಮಿ ಗ್ರೂಪ್ಸ್ ನ ಮೋಹನ್ ಕುಮಾರ್, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್.ಶೆಟ್ಟಿ, ಸಂಧ್ಯಾ ಟ್ರೇಡರ್ಸ್ ನ ರಾಜೇಶ್ ಪೈ, ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳು ಜಯಕರ್ ಶೆಟ್ಟಿ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು, ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು ಮತ್ತು ಭಕ್ತಾದಿಗಳು ಭಾಗವಹಿಸಿದ್ದರು.


- Advertisement -

Latest News

error: Content is protected !!