Friday, May 17, 2024
Homeಆರಾಧನಾಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಸ್ವರ್ಣತಾಂಬೂಲ ಪ್ರಶ್ನೆ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಸ್ವರ್ಣತಾಂಬೂಲ ಪ್ರಶ್ನೆ

spot_img
- Advertisement -
- Advertisement -

ಪುತ್ತೂರು: ಪುತ್ತೂರಿನ ಸೀಮಾಧಿಪತಿ, ಆರಾಧ್ಯದೈವ, ಇತಿಹಾಸ ಪ್ರಸಿದ್ಧ ಮಹಾತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನವೆಂಬರ್ 21ರಂದು ಸ್ವರ್ಣ ತಾಂಬೂಲ ಪ್ರಶ್ನೆ ಚಿಂತನೆಯನ್ನು ಆಯೋಜಿಸಲಾಗಿದೆ.

ಖ್ಯಾತ ಜ್ಯೋತಿರ್ ವಿದ್ವಾನ್ ವೆಂಕಟರಮಣ ಭಟ್ ನೇತೃತ್ವದಲ್ಲಿ ಪ್ರಶ್ನಾಚಿಂತನೆ ಆರಂಭಗೊoಡಿತು. ಅಷ್ಟಮಂಗಲ ಪ್ರಶ್ನಾ ಚಿಂತನೆಗೆ ಪೂರ್ವಭಾವಿಯಾಗಿ ಈ ಸ್ವರ್ಣ ತಾಂಬೂಲ ಪ್ರಶ್ನೆ ಆರಂಭಗೊoಡಿತು.
ಮುoಜಾನೆ ತಜ್ಞರನ್ನು ದೇವಳದ ರಾಜಗೋಪುರದಲ್ಲಿ ಸ್ವಾಗತಿಸಿ, ಪೂರ್ಣಕುಂಭ ಸ್ವಾಗತದಿಂದ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ಬಳಿಕ ದೇವಳದ ಪ್ರಕಾರಗೋಡೆಗಳಲ್ಲಿ ನಮಸ್ಕರಿಸಿ, ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಮಾಡಿ ದೇವಳದ ಗೋಪುರದಲ್ಲಿ ದೇವಳದ ಆತಿಥ್ಯಕ್ಕೆ ಸಂಬoಧಿಸಿ ಬೆಲ್ಲ ನೀರು ಸಿಯಾಳವನ್ನು ಸ್ಪರ್ಶಮಾಡಿದ ಸ್ವರ್ಣ ಪ್ರಶ್ನೆ ಆರಂಭಿಸಿದರು.


ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಸದಸ್ಯರಾದ ಶೇಖರ್ ನಾರಾವಿ, ರಾಮದಾಸ್ ಗೌಡ, ರಾಮಚಂದ್ರ ಕಾಮತ್, ಐತಪ್ಪ ನಾಯ್ಕ, ರವೀಂದ್ರನಾಥ ರೈ ಬಳ್ಳಮಜಲು, ವಿಣಾ ಬಿ. ಕೆ, ಡಾ. ಸುಧಾ ಎಸ್ ರಾವ್, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಮಾಜಿ ಆಡಳಿತ ಮೋಕೇಸ್ತರ ಎನ್.ಕೆ. ಜಗನ್ನಿವಾಸ್ ಉಪಸ್ಥಿತರಿದ್ದರು.


ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಮತ್ತು ದೋಷಗಳ ಕುರಿತಂತೆ ಅಷ್ಟಮಂಗಲ ಪ್ರಶ್ನಾ ಚಿಂತನೆಯಿoದ ತಿಳಿದುಕೊಳ್ಳಲು ವ್ಯವಸ್ಥಾಪನಾ ಸಮಿತಿ ನಿರ್ಧರಿಸಿದ್ದು, ನವೆಂಬರ್ 29ರಿಂದ ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆಯಲಿದೆ.

- Advertisement -
spot_img

Latest News

error: Content is protected !!