Saturday, June 6, 2026
Homeಕರಾವಳಿಉಡುಪಿಉಡುಪಿ: ದುರಸ್ತಿ ಕಾರ್ಯ ನಡೆಯುವಾಗ ಎಚ್ಚರಿಕೆ ಫಲಕ ಕೂಡ ಹಾಕಲಿಲ್ಲ, ನೇರ ಅಪಘಾತಕ್ಕೆ ಆಹ್ವಾನ !

ಉಡುಪಿ: ದುರಸ್ತಿ ಕಾರ್ಯ ನಡೆಯುವಾಗ ಎಚ್ಚರಿಕೆ ಫಲಕ ಕೂಡ ಹಾಕಲಿಲ್ಲ, ನೇರ ಅಪಘಾತಕ್ಕೆ ಆಹ್ವಾನ !

- Advertisement -
- Advertisement -

ಉಡುಪಿಯ ಹಲವೆಡೆ ರಸ್ತೆ ದುರಸ್ತಿ ಕೆಲಸ ನಡೆಯುತ್ತಿದೆ. ವಾಹನಗಳು ಸಂಚರಿಸುವ ಸಮಯದಲ್ಲಿ ಈ ಗುಂಡಿಗಳು, ಮ್ಯಾನ್ ಹೋಲ್ ರಾತ್ರಿ ಹೊತ್ತು ಕಾಣಿಸುವುದಿಲ್ಲ.

ಅಂಬಲಪಾಡಿ ವೃತ್ತದಿಂದ ಬ್ರಹ್ಮಗಿರಿ ಸರ್ಕಲ್‌ಗೆ ಸಾಗುವ ರಸ್ತೆಯಲ್ಲಿ ಮ್ಯಾನ್‌ಹೋಲ್‌ಗಳ ದುರಸ್ತಿ ಕಾಮಗಾರಿ ನಡೆಯುತ್ತಿದೆ. ಇಲ್ಲಿ ಯಾವುದೇ ಸೂಚನಾ ಫಲಕಗಳನ್ನು ಹಾಕಲಿಲ್ಲ.

ಕಿರಿದಾದ ಹಾಗೂ  ಅತ್ಯಂತ ಹೆಚ್ಚು ವಾಹನಗಳ ದಟ್ಟಣೆ ಇರುವ ಈ ರಸ್ತೆಯಲ್ಲಿ ಮ್ಯಾನ್‌ಹೋಲ್‌ ದುರಸ್ತಿ ಮಾಡುವಾಗ ಕನಿಷ್ಠ ಪಕ್ಷ ಎಚ್ಚರಿಕೆಯ ಫಲಕಗಳನ್ನು ಹಾಕದಿರುವುದು ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ಹಾಗಿದೆ.

ಕಾಮಗಾರಿಯ ಗುತ್ತಿಗೆ ಪಡೆದವರು ಎಲ್ಲಿಯೇ ರಸ್ತೆ ದುರಸ್ತಿ ನಡೆಸಿದರೂ ಅಲ್ಲಿ ರಸ್ತೆಯಲ್ಲಿ ಎಚ್ಚರಿಕೆಯ ಫಲಕಗಳನ್ನು ಹಾಕಬೇಕು ಅಥವಾ ಬ್ಯಾರಿಕೇಡ್‌ಗಳನ್ನು ಅಡ್ಡವಿಟ್ಟು ಟೇಪ್‌ ಕಟ್ಟಬೇಕು. ಇಲ್ಲಿ ಯಾವುದೇ ಎಚ್ಚರಿಕೆ ಫಲಕಗಳು ಇಲ್ಲ. ಸಂಬಂಧ ಪಟ್ಟವರು ಗಮನಹರಿಸಬೇಕಾಗಿದೆ.

- Advertisement -

Latest News

error: Content is protected !!