Thursday, June 4, 2026
Homeಕರಾವಳಿಪಡುಬಿದ್ರೆ ಪೇಟೆಯಲ್ಲಿ ಭೀಕರ ಅಪಘಾತ !

ಪಡುಬಿದ್ರೆ ಪೇಟೆಯಲ್ಲಿ ಭೀಕರ ಅಪಘಾತ !

- Advertisement -
- Advertisement -

ಕಾಪು: ಸ್ಕೂಟರ್‌ನಲ್ಲಿ ಮಂಗಳೂರು ಕಡೆಗೆ ಹೋಗುತ್ತಿದ್ದ ಪಾದೆಬೆಟ್ಟು ನಿವಾಸಿ ಬಾಲಕೃಷ್ಣ ಭಟ್ (74) ಅವರಿಗೆ ಹಿಂಬದಿಯಿಂದ ಬಂದ ಕಾರು ಢಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾರೆ. ಪಡುಬಿದ್ರೆಯ ಪೇಟೆಯ ಹೆದ್ದಾರಿ ತಿರುವಿನಲ್ಲಿ ಅಪಘಾತ ಸಂಭವಿಸಿದೆ.

ಡಿವೈಡರ್ ದಾಟಿ ಹೆಜಮಾಡಿ ಕಡೆಗೆ ತೆರಳುತ್ತಿದ್ದ ವೇಳೆ ಉಡುಪಿ ಕಡೆಯಿಂದ ಹೆಜಮಾಡಿ ಕಡೆಗೆ ಬರುತ್ತಿದ್ದ ಕಾರು ಹಿಂಬದಿಯಿಂದ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಮತ್ತು ಸವಾರ ಅಪಘಾತ ಸಂಭವಿಸಿದ ಸ್ಥಳದಿಂದ ಸುಮಾರು 25 ಅಡಿ ದೂರಕ್ಕೆ ಎಸೆಯಲ್ಪಟ್ಟರು. ಕೂಡಲೇ ಜನರು ಭಟ್ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಮಾರ್ಗಮಧ್ಯೆ ಅವರನ್ನು ಆಂಬ್ಯುಲೆನ್ಸ್‌ಗೆ ಸ್ಥಳಾಂತರಿಸಲಾಯಿತು. ಅತಿಯಾದ ರಕ್ತಸ್ರಾವದಿಂದ ಬಾಲಕೃಷ್ಣ ಭಟ್ ಆಸ್ಪತ್ರೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ.

ಬಾಲಕೃಷ್ಣ ಭಟ್ ಈ ಹಿಂದೆ ತಮಿಳುನಾಡು ಮತ್ತು ಪಡುಬಿದ್ರೆಯ ಹೊಟೇಲ್‌ಗಳಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದರು. ಅವರು ಪಾದೆಬೆಟ್ಟು ಪ್ರಾದೇಶಿಕ ಬ್ರಾಹ್ಮಣ ಸಂಘದಲ್ಲಿ ಸಕ್ರಿಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇಲ್ಲಿಯವರೆಗೆ ಪಡುಬಿದ್ರೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು 108 ಆಂಬ್ಯುಲೆನ್ಸ್ ಸೇವೆಯಿಂದ ವಂಚಿತವಾಗಿವೆ.

- Advertisement -

Latest News

error: Content is protected !!