Sunday, June 7, 2026
Homeಅಪರಾಧಮಂಗಳೂರು : ಪರಾರಿಯಾಗಿದ್ದ ಆರೋಪಿ ಮೂಡಬಿದ್ರಿ ಪೊಲೀಸರ ಬಲೆಗೆ !!

ಮಂಗಳೂರು : ಪರಾರಿಯಾಗಿದ್ದ ಆರೋಪಿ ಮೂಡಬಿದ್ರಿ ಪೊಲೀಸರ ಬಲೆಗೆ !!

- Advertisement -
- Advertisement -

ಮಂಗಳೂರು : ಕ್ರಿಮಿನಲ್ ಪ್ರಕರಣವೊಂದರಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೋಟೆಬಾಗಿಲು ನಿವಾಸಿ ಪ್ರವೀಣ್ ಕುಮಾರ್(46) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.ಮಾರಕಾಸ್ತ್ರಗಳನ್ನು ಹೊಂದಿರುವ ಹಾಗೂ ಭೂಗತ ಪಾತಕಿಗಳೊಂದಿಗೆ ನಂಟು ಹೊಂದಿದ ಮಾಹಿತಿ ಹಿನ್ನೆಲೆಯಲ್ಲಿ ವಿಚಾರಣೆಗೆಂದು ಆರೋಪಿಯನ್ನು ಕರೆ ತರಲು ಮೂಡಬಿದಿರೆ ಪೊಲೀಸರು ಆತನ ಮನೆಗೆ ಹೋಗಿದ್ದರು. ಈ ಸಂದರ್ಭ ಮನೆಯಲ್ಲಿದ್ದ ಆರೋಪಿ ಪೊಲೀಸರನ್ನು ಕಂಡು ಪರಾರಿಯಾಗಲೆತ್ನಿಸಿದ್ದಾನೆ ಎನ್ನಲಾಗಿದೆ. ಆದರೆ ಪೊಲೀಸರು ಆತನನ್ನು ಬೆನ್ನಟ್ಟಿ ಬಂಧಿಸಿದ್ದಾರೆ.

ಪೊಲೀಸರ ಕತ್ಯರ್ವಕ್ಕೆ ಅಡ್ಡಿಪಡಿಸಿ ಆರೋಪದಲ್ಲಿ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

- Advertisement -

Latest News

error: Content is protected !!