Sunday, June 7, 2026
Homeತಾಜಾ ಸುದ್ದಿಭಾರತದಲ್ಲೂ ಡೆಲ್ಟಾ ಪ್ರಭೇದದ ಉಪ-ಪ್ರಭೇದ ಎವೈ 4.2 ಪತ್ತೆ !

ಭಾರತದಲ್ಲೂ ಡೆಲ್ಟಾ ಪ್ರಭೇದದ ಉಪ-ಪ್ರಭೇದ ಎವೈ 4.2 ಪತ್ತೆ !

- Advertisement -
- Advertisement -



ಬೆಂಗಳೂರು: ಕೋವಿಡ್ ಸಾಂಕ್ರಾಮಿಕತೆಯ ಮೂರನೇ ಅಲೆ ಸಾಧ್ಯತೆ ಬಗ್ಗೆ ಚರ್ಚೆಗಳು ನಡೆದಿರುವ ಸಂದರ್ಭದಲ್ಲೆ ಕರೊನಾ ವೈರಸ್​ನ ಮಾರಕ ಡೆಲ್ಟಾ ಪ್ರಭೇದದ ಉಪ-ಪ್ರಭೇದ ಎವೈ 4.2ರ 17 ಪ್ರಕರಣಗಳು ಕರ್ನಾಟಕ ಮತ್ತು ಮಹಾರಾಷ್ಟ್ರ ಸಹಿತ ಐದು ರಾಜ್ಯಗಳಲ್ಲಿ ಪತ್ತೆಯಾಗಿದೆ.

ಚೀನಾ, ರಷ್ಯಾ, ಬೆಲ್ಜಿಯಂ, ನ್ಯೂಜಿಲ್ಯಾಂಡ್ ಮೊದಲಾದ ಐರೋಪ್ಯ ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತು ಸಾವಿನ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು,ಮಾರಕ ವ್ಯಾಧಿಯ ಇನ್ನೊಂದು ಅಲೆ ಕಾಡಲಿದೆಯೇ ಎಂಬ ಭಯಕ್ಕೆ ಕಾರಣವಾಗಿದೆ.

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 16,156 ಕೋವಿಡ್ 19 ಸೋಂಕು ಪ್ರಕರಣ ಪತ್ತೆಯಾಗಿದ್ದು, ಇದರೊಂದಿಗೆ ದೇಶದಲ್ಲಿ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 3,42,31,809ಕ್ಕೆ ಏರಿಕೆಯಾಗಿದೆ ಎಂದು ಗುರುವಾರ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.

ಕರ್ನಾಟಕದಲ್ಲಿ ಗುರುವಾರ 1.13 ಲಕ್ಷ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷೆ ಹೆಚ್ಚಳದೊಂದಿಗೆ ಸೋಂಕು ಹಾಗೂ ಸಾವಿನ ಪ್ರಕರಣಗಳ ಸಂಖ್ಯೆಯೂ ಕೊಂಚ ಏರಿಕೆಯಾಗಿವೆ. 478 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 17 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಈವರೆಗಿನ ಒಟ್ಟು ಸೋಂಕಿತರ ಸಂಖ್ಯೆ 29.87 ಲಕ್ಷ ಮೀರಿದ್ದು, ಮೃತರ ಸಂಖ್ಯೆ 38,054ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 334 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರ ಸಂಖ್ಯೆ 29.40 ಲಕ್ಷ ಮೀರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 8,557 ತಲುಪಿದೆ.

- Advertisement -

Latest News

error: Content is protected !!