ಬೆಳ್ತಂಗಡಿ: ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಮಂಡಲದ ಬಜರಂಗದಳ, ಮಾತೃಭಕ್ತಿ, ದುರ್ಗಾವಾಹಿನಿ ಹಾಗೂ ಶ್ರಮಿಕ ಸೇವಾ ಟ್ರಸ್ಟ್ ಬೆಳ್ತಂಗಡಿ ಇದರ ನೇತೃತ್ವದಲ್ಲಿ ‘ಭಜನೆ’ ಭಗವಂತನಿಗೆ ಭಕ್ತಿಯ ಸಮರ್ಪಣೆ ಎಂಬ ಘೋಷವಾಕ್ಯದಡಿ ಭಜನಾ ಭಜನಾ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದೆ.
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ 5 ಲಕ್ಷ ರೂ, ದ್ವಿತೀಯ ಬಹುಮಾನವಾಗಿ 2.5 ಲಕ್ಷ ರೂ., ಹಾಗೂ ಉತ್ತಮ ಪ್ರದರ್ಶನ ನೀಡಿದ 5 ತಂಡಗಳಿಗೆ 1 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತಿದೆ.
ಇನ್ನು ಸ್ಪರ್ಧೆಯ ನಿಯಮಾವಳಿಯಾಗಿ ಪುರುಷರ ಕುಣಿತ ಭಜನೆ ತಂಡದಲ್ಲಿ ಕನಿಷ್ಟ 12 ಜನ ಪಾಲ್ಗೊಳ್ಳಬೇಕು, ಮಹಿಳೆಯರ ಕುಳಿತು ಮಾಡುವ ಭಜನಾ ತಂಡದಲ್ಲಿ ಕನಿಷ್ಟ 25 ಜನ ಸ್ಪರ್ಧಿಗಳು ಭಾಗಹಿಸಬೇಕು ಹಾಗೂ 15 ವರ್ಷದ ಕೆಳಗಿನ ಮಕ್ಕಳ ಕುಳಿತು ಮಾಡುವ ಭಜನಾ ತಂಡದಲ್ಲಿ ಕನಿಷ್ಟ 25 ಸಂಖ್ಯೆ ಇರತಕ್ಕದ್ದು.

ತಾಳ ಹಾಗೂ ತಮ್ಮಿಯನ್ನು ಹೊರತುಪಡಿಸಿ ಇನ್ನಿತರ ಯಾವುದೇ ಸಂಗೀತ ಪರಿಕರಗಳನ್ನು ಕೂಡ ಬಳಸುವಂತಿಲ್ಲ. ಒಂದು ಮಂಡಳಿಯು 60 ನಿಮಿಷಗಳ ಪ್ರದರ್ಶನ ನೀಡುತ್ತದೆ.ಅಂದರೆ ಕುಣಿತ ಭಜನೆ 20ನಿಮಿಷ, ಮಹಿಳೆಯರ ಕುಳಿತು ಭಜನೆ 20ನಿಮಿಷ ಮತ್ತು 15 ವರ್ಷದ ಕೆಳಗಿನ ಮಕ್ಕಳ ಕುಳಿತು ಮಾಡುವ ಭಜನೆ 20 ನಿಮಿಷ.
ಈ ಭಜನಾ ಸ್ಪರ್ಧೆಯು ಬೆಳ್ತಂಗಡಿ ತಾಲೂಕಿಗೆ ಸಂಬಂಧಪಟ್ಟ ಭಜನಾ ತಂಡಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿರುವುದು. ಇನ್ನು ಭಜನಾ ಮಂಡಳಿಯ ಸ್ವಚ್ಛತೆ ಮತ್ತು ಅಲಂಕಾರಕ್ಕೆ ವಿಶೇಷ ಪ್ರಾಧಾನ್ಯತೆ ನೀಡಲಾಗುವುದು.
ಭಜನೆಯಲ್ಲಿ ದಾಸರ ಪದಗಳಿಗೆ ಪ್ರಮುಖ ಆದ್ಯತೆಯನ್ನು ನೀಡಲಾಗುವುದು. ಭಾಗವಹಿಸುವ ಮಂಡಳಿಯು ಮೂರು ವಿಭಾಗಗಳಲ್ಲಿಯೂ ಕಡ್ಡಾಯವಾಗಿ ಭಾಗವಹಿಸಬೇಕು.
ಸ್ಪರ್ಧೆಯಲ್ಲಿ ಭಜನಾ ತಂಡವನ್ನು ನೋಂದಾವಣೆಗೊಳಿಸಲು ನವೆಂಬರ್ 1ರಿಂದ ಡಿಸೆಂಬರ್ 15ರ ವರೆಗೆ ಕಾಲಾವಕಾಶ ನೀಡಲಾಗಿದ್ದು, ಜನವರಿ 1ನೇ ತಾರೀಖಿನ ನಂತರ ಆಯೋಜಕರ ಸೂಚನೆಯಂತೆ ಸ್ಪರ್ಧೆ ಆರಂಭಗೊಳ್ಳಲಿದೆ.
ಇನ್ನು ಸ್ಪರ್ಧೆಯಲ್ಲಿ ಆಯೋಜಕರ ಹಾಗೂ ತೀರ್ಪುಗಾರರ ನಿರ್ಧಾರ ಅಂತಿಮವಾಗಿದ್ದು, ಭಾಗವಹಿಸುವವರು 9632863443 ಈ ಸಂಖ್ಯೆಗೆ ಕರೆ ಮಾಡಿ ಭಜನಾ ತಂಡದ ನೋಂದಾವಣೆ ಮಾಡಿಕೊಳ್ಳಬೇಕು.
ಹೆಚ್ಚಿನ ಮಾಹಿತಿ ಮತ್ತು ಸಂಪರ್ಕಕ್ಕಾಗಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿಯಾದ ನವೀನ್ ನೆರಿಯ( 9741036849 ), ಭಜನಾ ಪರಿಷತ್,ನಿಕಟಪೂರ್ವ ಅಧ್ಯಕ್ಷರು, ಮಂಜುನಾಥ ಶೆಟ್ಟಿ ನಿಡಿಗಲ್(9448060940 ) ಇವರಲ್ಲಿ ಕೇಳಬಹುದು.


