Friday, June 5, 2026
Homeಅಪರಾಧಮಂಗಳೂರು : ಪಬ್ ಮೇಲೆ ಪೊಲೀಸರ ದಾಳಿ!

ಮಂಗಳೂರು : ಪಬ್ ಮೇಲೆ ಪೊಲೀಸರ ದಾಳಿ!

- Advertisement -
- Advertisement -

ಮಂಗಳೂರು : ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ನಗರದ ಎಂಜಿ ರಸ್ತೆಯಲ್ಲಿರುವ ಪಬ್‌ ಒಂದರ ಮೇಲೆ ಸಿಸಿಬಿ ಪೊಲೀಸರು ಶನಿವಾರ ದಾಳಿ ನಡೆಸಿದ್ದಾರೆ.

ದಾಳಿಯು ಇನ್‌ಸ್ಪೆಕ್ಟರ್‌ ಮಹೇಶ್‌ ಪ್ರಸಾದ್‌ ಮತ್ತು ಬರ್ಕೆ ಠಾಣೆ ಇನ್‌ಸ್ಪೆಕ್ಟರ್‌ ಜ್ಯೋತಿರ್ಲಿಂಗ ನೇತೃತ್ವದಲ್ಲಿ ನಡೆಯಿತು.

ಜೋರಾದ ಧ್ವನಿವರ್ಧಕಗಳನ್ನು ಬಳಸಿ ಕಿರಿಕಿರಿ ಉಂಟು ಮಾಡಲಾಗುತ್ತಿತ್ತು,ನಿಗದಿತ ಅವಧಿಗಿಂತ ಹೆಚ್ಚು ಸಮಯ ತೆರೆಯಲಾಗುತ್ತಿತ್ತು ಹಾಗೂ ಪಬ್‌ನಿಂದ ಹೊರಬರುವವರು ಅಶ್ಲೀಲವಾಗಿ ವರ್ತಿಸುತ್ತಿದ್ದರು ಎಂಬುದಾಗಿ ಸಾರ್ವಜನಿಕರು ದೂರಿದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ತಿಳಿಸಿದ್ದಾರೆ.

ಇದೇ ವೇಳೆ ನಗರದ ಬೇರೆ ಪಬ್‌ ಮತ್ತು ಬಾರ್‌ ಆಯಂಡ್‌ ರೆಸ್ಟೋರೆಂಟ್‌ಗಳ ಮೇಲೂ ದೂರು ಬಂದಿದ್ದು ಅವುಗಳ ಮೇಲೆ ಕೂಡ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

- Advertisement -

Latest News

error: Content is protected !!