Thursday, July 3, 2025
Homeಕರಾವಳಿಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಗೆ 108 ವೆಂಟಿಲೇಟರ್ ಹೊಸ ಆಂಬುಲೆನ್ಸ್ ಹಸ್ತಾಂತರ!

ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಗೆ 108 ವೆಂಟಿಲೇಟರ್ ಹೊಸ ಆಂಬುಲೆನ್ಸ್ ಹಸ್ತಾಂತರ!

spot_img
- Advertisement -
- Advertisement -

ಬೆಳ್ತಂಗಡಿ: ಸರಕಾರದ ವತಿಯಿಂದ ಆರೋಗ್ಯ ಇಲಾಖೆಯ ಮೂಲಕ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಗೆ ಬುಧವಾರ ಆಧುನಿಕ ಸೌಲಭ್ಯ ಇರುವ 108 ವೆಂಟಿಲೇಟರ್ ಹೊಸ ಅಂಬುಲೆನ್ಸ್‌ನ್ನು ಶಾಸಕ ಹರೀಶ್ ಪೂಂಜ ಅವರು ಆಸ್ಪತ್ರೆಗೆ ಹಸ್ತಾಂತರಿಸಿದರು.

ಶಾಸಕ ಹರೀಶ್ ಪೂಂಜ ಅವರು ತಾವೇ ಅಂಬುಲೆನ್ಸ್ ವಾಹನವನ್ನು ಚಲಾಯಿಸುವ ಮೂಲಕ ಚಾಲನೆ ನೀಡಿ, ತಾಲೂಕಿನ ಸರಕಾರಿ ಆಸ್ಪತ್ರೆಗೆ ಸರಕಾರದ ವತಿಯಿಂದ ಆಧುನಿಕ ಸೌಲಭ್ಯದ ಅಂಬುಲೆನ್ಸ್ ನೀಡಲಾಗಿದೆ. ಇದರಲ್ಲಿ ವೆಂಟಿಲೇಟರ್, ಕಾರ್ಡಿಯಲ್ ಮೊನಿಟರ್, ಸಿರೇಂಜ್ ಪಂಪ್, ಮೊನಿಟರ್ ಮೊದಲಾದ ಸೌಲಭ್ಯಗಳನ್ನು ಒಳಗೊಂಡಿದೆ. ಜಿಲ್ಲೆಯ ಪ್ರತಿ ತಾಲೂಕಿಗೆ ತಲಾ ಒಂದೊಂದು ಅಂಬುಲೆನ್ಸ್ ನೀಡಲಾಗಿದ್ದು, ಅನಾರೋಗ್ಯದ ಸಂದರ್ಭ ಇದರ ಉಪಯೋಗ ಕಟ್ಟ ಕಡೆಯ ವ್ಯಕ್ತಿಗೂ ಸಿಗುವಂತಾಗಲು ಇಲ್ಲಿನ ಆಸ್ಪತ್ರೆಗೆ ನೀಡಲಾಗಿದೆ ಎಂದರು.

ಈ ಸಂದರ್ಭ ತಾಲೂಕು ಆಡಳಿತಾಧಿಕಾರಿ ಡಾ. ಕಲಾಮಧು, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದಾಧಿಕಾರಿ ಡಾ. ವಿದ್ಯಾವತಿ, ಡಾ. ಆಶಾಲತಾ, ಕಾರ್ಯಕ್ರಮ ಸಂಯೋಜಕ ಅಜಯ್ ಕಲ್ಲೇಗ, ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ, 108 ನೌಕರರ ಸಂಘದ ಜಿಲ್ಲಾಧ್ಯಕ್ಷ ಲೂಯಿಸ್ ಡಿಸೋಜ, ಜಿಲ್ಲಾ ವ್ಯವಸ್ಥಾಪಕ ಮುನೀಶ್, 108 ಸ್ಟಾಪ್ ನರ್ಸ್‌ಗಳಾದ ಕಸ್ತೂರಿ, ಕೇಶವ, ಚಾಲಕರಾದ ಸ್ವಾಮಿ, ಸದೆಯಪ್ಪ ಮೊದಲಾದವರು ಇದ್ದರು.

- Advertisement -
spot_img

Latest News

error: Content is protected !!