Tuesday, June 9, 2026
Homeಕರಾವಳಿಕಡಬ: ಕೋಡಿಂಬಾಳ ಅರ್ಪಾಜೆ ನಿವಾಸಿ ಚಂದ್ರಶೇಖರ್ ರೈ ಇಲಿ ಜ್ವರದಿಂದ ಮೃತ್ಯು!

ಕಡಬ: ಕೋಡಿಂಬಾಳ ಅರ್ಪಾಜೆ ನಿವಾಸಿ ಚಂದ್ರಶೇಖರ್ ರೈ ಇಲಿ ಜ್ವರದಿಂದ ಮೃತ್ಯು!

- Advertisement -
- Advertisement -

ಕಡಬ: ಕೋಡಿಂಬಾಳ ಗ್ರಾಮದ ಅರ್ಪಾಜೆ ನಿವಾಸಿ ಚಂದ್ರಶೇಖರ ರೈ(55ವ,) ಎಂಬವರು ಇಲಿ ಜ್ವರದಿಂದ ಮೃತರಾಗಿದ್ದಾರೆ.

ಅ.15ರಂದು ಅಸ್ವಸ್ಥಗೊಂಡಿದ್ದ ಚಂದ್ರಶೇಖರ ಅವರನ್ನು ಕಡಬ ಆಸ್ಪತ್ರೆಗೆ ಕರೆತರಲಾಗಿತ್ತು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಿಸಿದ್ದರು. ನಂತರದಲ್ಲಿ ಅ.17ರಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ದಾರಿ ಮಧ್ಯದಲ್ಲಿ ಮೃತಪಟ್ಟಿದ್ದಾರೆ.

ಚಂದ್ರಶೇಖರ್ ಅವರಿಗೆ ಇಲಿ ಜ್ವರ ಇರುವುದು ಪುತ್ತೂರು ಆಸ್ಪತ್ರೆಯಲ್ಲಿ ಖಚಿತಗೊಂಡಿತ್ತು ಎಂದು ಅವರ ಮನೆಯವರು ತಿಳಿಸಿದ್ದಾರೆ. ಮೃತರು ಪತ್ನಿ ಜಲಜಾಕ್ಷಿ, ಮಕ್ಕಳಾದ ಪ್ರಶಾಂತ್, ಪ್ರದೀಪ್, ಪ್ರಜ್ವಳ್, ಪ್ರತಿಕ್ಷಾ ಅವರನ್ನು ಅಗಲಿದ್ದಾರೆ. ಮೃತರು ಕೃಷಿಕರಾಗಿದ್ದು ಜತೆಗೆ ಜಲಶೋಧನೆ ಮಾಡುವ ಕೆಲಸ ನಿರ್ವಹಿಸುತ್ತಿದ್ದರು.

- Advertisement -

Latest News

error: Content is protected !!