- Advertisement -
- Advertisement -
ಬೆಂಗಳೂರು : ಸ್ಯಾಂಡಲ್‌ವುಡ್‌ನ ಹಿರಿಯ ನಟ, ಪಾಪ ಪಾಂಡು ಧಾರವಾಹಿ ಮೂಲಕ ಖ್ಯಾತಿ ಗಳಿಸಿದ್ದ ಶಂಕರ್ ರಾವ್(84) ರವರು ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಂತ ಹಿರಿಯ ನಟ ಶಂಕರ್ ರಾವ್ ಅವರು ಬೆಳಿಗ್ಗೆ 6.30ಕ್ಕೆ ಕೊನೆಯುಸಿರೆಳೆದಿದ್ದಾರೆ. ಇಂದು ಮಧ್ಯಾಹ್ನ ಬನಶಂಕರಿ ಚಿತಾಗಾರದಲ್ಲಿ ಶಂಕರ್ ರಾವ್ ಅವರ ಅಂತ್ಯಕ್ರಿಯೆ ನಡೆಸಲು ಕುಟುಂಬದವರು ತೀರ್ಮಾನಿಸಿದ್ದಾರೆ.
ಅಂದಹಾಗೇ, ಶಾಲಾ ದಿನಗಳಿಂದಲೂ ನಟನೆಯಲ್ಲಿ ತುಂಬಾನೇ ಆಸಕ್ತಿಯನ್ನು ಹೊಂದಿದ್ದಂತ ಕಲಾವಿದ ಶಂಕರ್ ರಾವ್, ರಂಗಭೂಮಿಯಲ್ಲಿ ಹವ್ಯಾಸಿ ಕಲಾವಿಧರಾಗಿ ಪಾದಾರ್ಪಣೆ ಮಾಡಿದ್ದರು. ಹಲವಾರು ಸಿನಿಮಾ ಸೇರಿದಂತೆ ನಾಟಕಗಳಲ್ಲಿ ನಟಿಸಿದ್ದರು. ಇವರಿಗೆ ಹೆಚ್ಚು ಖ್ಯಾತಿ ತಂದಿಕೊಟ್ಟಿದ್ದು ಪಾಪಾ ಪಾಂಡು ಧಾರವಾಹಿ ಆಗಿತ್ತು.
- Advertisement -