Thursday, June 4, 2026
Homeತಾಜಾ ಸುದ್ದಿಪುತ್ರನ ಡ್ರಗ್ಸ್ ಪ್ರಕರಣ : ಶಾರುಖ್ ಖಾನ್ ಜಾಹೀರಾತುಗಳಿಗೆ ಬಿತ್ತು ಕತ್ತರಿ!

ಪುತ್ರನ ಡ್ರಗ್ಸ್ ಪ್ರಕರಣ : ಶಾರುಖ್ ಖಾನ್ ಜಾಹೀರಾತುಗಳಿಗೆ ಬಿತ್ತು ಕತ್ತರಿ!

- Advertisement -
- Advertisement -

ನವದೆಹಲಿ : ಡ್ರಗ್ ಪ್ರಕರಣದಲ್ಲಿ ಶಾರುಖ್ ಖಾನ್ ಮಗ ಆರ್ಯನ್ ಖಾನ್ ವಿರುದ್ಧ ನಡೆಯುತ್ತಿರುವ ತನಿಖೆಯ ನಡುವೆ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಒಳಗೊಂಡ ಎಲ್ಲಾ ಜಾಹೀರಾತುಗಳನ್ನು ಸ್ಥಗಿತಗೊಳಿಸಿದೆ.

ಸದ್ಯ ಡ್ರಗ್ಸ್ ಕೇಸ್ ಆರೋಪದಡಿ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದು, ಇದರ ಪರಿಣಾಮ ಶಾರುಖ್ ಖಾನ್ ಮೇಲಾಗಿದೆ. ಪ್ರತಿಷ್ಠಿತ ಎಜ್ಯುಕೇಶನಲ್ ಕಂಪೆನಿಯೊಂದು ತನ್ನ ಎಲ್ಲ ಜಾಹೀರಾತುಗಳಿಂದ ಶಾರುಖ್ ಖಾನ್ ಅವರನ್ನು ವಜಾಗೊಳಿಸಿದೆ. 2017ರಿಂದ ಶಾರುಖ್ ಖಾನ್ ಈ ಪ್ರತಿಷ್ಠಿತ ಕಂಪೆನಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ತನ್ನ ಸ್ವಂತ ಮಗನಿಗೆ ಕಾನೂನು ಬದ್ಧವಾಗಿ ಬದುಕುವ, ಸಂಸ್ಕಾರ , ಸರಿಯಾದ ಶಿಕ್ಷಣ ಕೊಡದ ಶಾರುಖ್ ಖಾನ್‌, ಉಳಿದ ಮಕ್ಕಳಿಗೆ ಏನು ಶಿಕ್ಷಣ ಕೊಡುತ್ತಾರೆ ಎಂದು ಕೆಲ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ನಿಮ್ಮ ಪ್ರಚಾರತಂತ್ರದ ಬಗ್ಗೆ ಯೋಚನೆ ಮಾಡಿ. ಶಾರುಖ್ ಖಾನ್ ಎಲ್ಲಿಯವರೆಗೆ ನಿಮ್ಮ ಆಪ್‌ ಅಂಬಾಸಿಡರ್ ಆಗಿರುತ್ತಾರೋ, ಅಲ್ಲಿಯವರೆಗೆ ನಮ್ಮ ಫ್ಯಾಮಿಲಿ ನಿಮ್ಮ ಆಪ್‌ನ್ನು ಅನ್‌ಇನ್‌ಸ್ಟಾಲ್ ಮಾಡಿ ಇರುತ್ತೇವೆ .ಹೀಗಾಗಿ ಎಜ್ಯುಕೇಶನಲ್ ಕಂಪೆನಿ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಎಜ್ಯುಕೇಶನಲ್ ಆಪ್‌ ಶಾರುಖ್ ಖಾನ್ ಜೊತೆಗೆ ಪ್ರಚಾರ ಕಾರ್ಯಕ್ಕೆ ಮಾಡಿಕೊಂಡ ಎಲ್ಲ ಕೆಲಸಗಳು ಈಗಲೇ ಸ್ಟಾಪ್ ಆಗಲಿವೆ. ಇನ್ನು ಮುಂದೆ ಶಾರುಖ್ ಖಾನ್ ಜೊತೆಗೆ ಪ್ರಚಾರ ಕಾರ್ಯ ಮಾಡಲು ಒಪ್ಪುವುದಿಲ್ಲ. ಈ ಹಿಂದೆಯೇ ಕೆಲ ಒಪ್ಪಂದ ಆಗಿರೋದರಿಂದ ಎಜ್ಯುಕೇಶನಲ್ ಆಪ್ ಪ್ರಚಾರ ಕುರಿತಂತೆ ಶಾರುಖ್ ಖಾನ್‌ರ ಜಾಹೀರಾತು ಪ್ರಚಾರ ನಿಲ್ಲಿಸಲು ಒಂದಷ್ಟು ಸಮಯ ಬೇಕಾಗುವುದು ಎಂದು ಮೂಲಗಳು ಹೇಳಿವೆ. ಮೂರು ವಾರಗಳ ಹಿಂದೆ ಎಜ್ಯುಕೇಶನಲ್ ಆಪ್ ಜೊತೆ ಸೇರಿ ಶಾರುಖ್ ಖಾನ್‌ ಹೊಸ ಅಭಿಯಾನ ಆರಂಭಿಸಿದ್ದರು.

- Advertisement -

Latest News

error: Content is protected !!