Monday, June 8, 2026
Homeಕರಾವಳಿಉಡುಪಿಗಂಗೊಳ್ಳಿ: ಮೀನು ಮಾರುಕಟ್ಟೆಗೂ ತಟ್ಟಿದ ಕೋಮುದ್ವೇಷ; ಅನ್ಯಕೋಮಿನವರು ಖರೀದಿಸದ ಮೀನು!

ಗಂಗೊಳ್ಳಿ: ಮೀನು ಮಾರುಕಟ್ಟೆಗೂ ತಟ್ಟಿದ ಕೋಮುದ್ವೇಷ; ಅನ್ಯಕೋಮಿನವರು ಖರೀದಿಸದ ಮೀನು!

- Advertisement -
- Advertisement -

ಗಂಗೊಳ್ಳಿ: ಗೋಹತ್ಯೆ ವಿರೋಧಿಸಿ ನಡೆದ ಪ್ರತಿಭಟನೆ ನಂತರದಲ್ಲಿ ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ ಅನ್ಯಕೋಮಿನವರು ಮೀನು ಖರೀದಿಸುವುದನ್ನು ಸಂಪೂರ್ಣ ಸ್ಥಗಿತಗೊಳಿಸಿದ್ದು, ಕಳೆದ ಮೂರು ದಿನಗಳಿಂದ ಮಾರುಕಟ್ಟೆಯಲ್ಲಿ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿವೆ.

ಮುಸ್ಲಿಂ ಸಂಘಟನೆ ಮುಖಂಡರು ಗಂಗೊಳ್ಳಿ ಮಾರುಕಟ್ಟೆಯಲ್ಲಿ ಮೀನು ಖರೀದಿಸಬಾರದು ಎಂದು ತಾಕೀತು ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಇನ್ನು ಮೀನು ಖರೀದಿಗೆ ಬಂದ ತಮ್ಮ ಕೋಮಿನ ಜನರನ್ನು ವಾಪಾಸು ಕಳುಹಿಸುತ್ತಿರುವ ಯುವಕರ ವಿರುದ್ಧ ಮಹಿಳಾ ಮೀನುಗಾರರು ಗಂಗೊಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದಾರೆ. ಪೊಲೀಸ್ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ಅವರನ್ನು ಹಿಂದೆ ಕಳುಹಿಸಿದ್ದಾರೆ ಎಂದು ಹೇಳಲಾಗಿದೆ.

ಹಿಂದೂ ಜಾಗರಣ ವೇದಿಕೆ ಗೋಹತ್ಯೆ ವಿರೋಧಿಸಿ ನಡೆಸಿದ ಪ್ರತಿಭಟನೆಗೆ ಉತ್ತರವಾಗಿ ಮಹಿಳಾ ಮೀನುಗಾರರಿಂದ ಮೀನು ಖರೀದಿಸಬಾರದು ಎಂಬ ಸೂಚನೆ ಮುಖಂಡರಿಂದ ಪರೋಕ್ಷವಾಗಿ ನೀಡಲಾಗಿದೆ ಎಂದು ಹೇಳಲಾಗುತ್ತಿದ್ದು, ಸದಾ ಜನರಿಂದ ತುಂಬುತ್ತಿದ್ದ ಮಾರುಕಟ್ಟೆ ಇಂದು ಬಿಕೋ ಎನ್ನುತ್ತಿದೆ. ಇನ್ನು ಮೂರು ದಿನಗಳಿಂದ ಮೀನು ಮಾರಾಟ ಆಗದೆ ಸಾವಿರಾರು ರೂಪಾಯಿ ಮೌಲ್ಯದ ಮೀನು ಕೊಳೆತು ಹೋಗುತ್ತಿದೆ ಎಂದು ಮಹಿಳೆಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

- Advertisement -

Latest News

error: Content is protected !!