Tuesday, June 9, 2026
Homeಇತರಕೋಟ: ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿಗೆ ಅನಾರೋಗ್ಯ ಪೀಡಿತರ ಆಶಾಕಿರಣ, ಸಮಾಜ ಸೇವಕ ರವಿ ಕಟಪಾಡಿ ಆಯ್ಕೆ...!

ಕೋಟ: ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿಗೆ ಅನಾರೋಗ್ಯ ಪೀಡಿತರ ಆಶಾಕಿರಣ, ಸಮಾಜ ಸೇವಕ ರವಿ ಕಟಪಾಡಿ ಆಯ್ಕೆ…!

- Advertisement -
- Advertisement -

ಕೋಟ: ಕೋಟದ ಗ್ರಾಮೀಣ ಭಾಗದಲ್ಲಿ ಕಳೆದ 24ವರ್ಷಗಳಿಂದ ತನ್ನ ಸಾಮಾಜಿಕ, ಕಲಾರಾಧನೆ, ಭಾಷಾಭಿಮಾನದ ನಡುವೆ ತನ್ನ ಸೇವೆಯನ್ನು ನಿರಂತರವಾಗಿ ನೀಡುತ್ತಾ ಬಂದಿರುವ ಕೋಟದ ಪಂಚವರ್ಣ ಯುವಕ ಮಂಡಲ ಪ್ರತಿವರ್ಷ ನವೆಂಬರ್ 1ರಂದು ಕೋಟದ ವರುಣತೀರ್ಥ ಕೆರೆ ಸಮೀಪ ಕನ್ನಡರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದೆ. ತನ್ನ ಸಂಸ್ಥೆಯ ಮೂಲಕ ಸಾಧಕನ್ನು ಗುರುತಿಸಿ ಪ್ರಶಸ್ತಿ ನೀಡುವ ಕಾರ್ಯಕ್ರಮಗಳ ನಡುವೆ ವಿವಿಧ ಸಾಂಸ್ಕೃತಿಕ, ಆಶಕ್ತ, ಆನಾರೋಗ್ಯ ಪೀಡಿತ ಕುಟುಂಬಗಳಿಗೆ ಸಹಾಯಹಸ್ತ, ಪ್ರತಿಭಾ ಪುರಸ್ಕಾರ, ಹೀಗೆ ನಾನಾ ರೀತಿಯ ವಿಶಿಷ್ಟ ಕಾರ್ಯಕ್ರಮಗಳಿಂದ ಮನೆಮಾತಾಗಿ ಬೆಳೆದಿದೆ.

ಈ ನಡುವೆ ಈ ಬಾರಿಯ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿಗೆ ಅನಾರೋಗ್ಯ ಪೀಡಿತರ ಆಶಾಕಿರಣ, ಸಮಾಜ ಸೇವಕ ರವಿ ಕಟಪಾಡಿ ಇವರನ್ನು ಆಯ್ಕೆಗೊಳಿಸಲಾಗಿದೆ. ಇದೇ ಬರುವ ನವೆಂಬರ್ 1ರಂದು ಕೋಟದ ವರುಣತೀರ್ಥಕೆರೆ ಸಮೀಪ ಅಮೃತೇಶ್ವರಿ ದೇವಳದ ಪಾರ್ಕಿಂಗ್ ಸ್ಥಳದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರದಾನಮಾಡಲಿದ್ದಾರೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!