Monday, June 8, 2026
Homeಅಪರಾಧಬೆಳ್ತಂಗಡಿ : ಅನ್ಯಕೋಮಿನ ಯುವಕನಿಂದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ!

ಬೆಳ್ತಂಗಡಿ : ಅನ್ಯಕೋಮಿನ ಯುವಕನಿಂದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ!

- Advertisement -
- Advertisement -

ಬೆಳ್ತಂಗಡಿ : ಮಚ್ಚಿನ ಇಲ್ಲಿಯ ಪುತ್ತಿಲ ಗ್ರಾಮದಲ್ಲಿ ವಾಸವಾಗಿರುವ ಅಪ್ರಾಪ್ತ ಬಾಲಕಿಗೆ ಅನ್ಯಕೋಮಿನ ಯುವಕನೋರ್ವ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಆರೋಪಿಸಿ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ಬಂಗೇರಕಟ್ಟೆ ನಿವಾಸಿ ನವಾಜ್ ಎಂಬವರ ವಿರುದ್ಧ ಫೋಕ್ಸೋ ಕಾಯ್ದೆಯಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತಿಲ ಗ್ರಾಮದಲ್ಲಿ ವಾಸ್ತವ್ಯವಿದ್ದು, ಪುಂಜಾಲಕಟ್ಟೆ ಪ್ರೌಢ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯೊಂದಿಗೆ ಆರೋಪಿ ನವಾಝ್ ಎಂಬವರು ತುಂಬಾ ಸಲುಗೆಯಿಂದ ನಡೆದುಕೊಂಡಿದ್ದು, ಬಳಿಕ ಆಕೆಯೊಂದಿಗೆ ಮೊಬೈಲ್ ಸಂಪರ್ಕವಿಟ್ಟುಕೊಂಡಿದ್ದನು. 3 ತಿಂಗಳ ಹಿಂದೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಕೆಯ ಮನೆಗೆ ನುಗ್ಗಿದ ಈತ ಆಕೆಯೊಂದಿಗೆ ಬಲವಂತವಾಗಿ ಲೈಂಗಿಕ ಸಂಬಂಧ ಬೆಳೆಸಿದ್ದು, ಬಳಿಕ ಯಾರಿಗಾದರೂ ಈ ವಿಚಾರ ತಿಳಿಸಿದ್ದಲ್ಲಿ ಕೊಂದು ಬಿಡುವುದಾಗಿ ಜೀವ ಬೆದರಿಕೆಯೊಡ್ಡಿದ್ದಾನೆ. ಅಲ್ಲದೆ ಪದೇ ಪದೇ ಈತ ತೊಂದರೆ ನೀಡುತ್ತಿದ್ದು, ಇದರಿಂದ ಬೇಸತ್ತು ತನ್ನ ಹೆತ್ತವರಿಗೆ ಈ ವಿಚಾರ ತಿಳಿಸಿ ತಡವಾಗಿ ದೂರು ನೀಡಿರುವುದಾಗಿ ಬಾಲಕಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿರುತ್ತಾರೆ.

ಬಾಲಕಿಯ ನೀಡಿದ ದೂರಿನನ್ವಯ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪುಂಜಾಲಕಟ್ಟೆ ಪೊಲೀಸರು ಆರೋಪಿ ನವಾಝ್ ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

- Advertisement -

Latest News

error: Content is protected !!