- Advertisement -
- Advertisement -
ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಕುಪ್ಪೂರು ಕ್ಷೇತ್ರದ ಡಾ. ಶ್ರೀಯತೀಶ್ವರ ಶಿವಾಚಾರ್ಯ ಸ್ವಾಮೀಜಿ (55) ಇಂದು ಉಸಿರಾಟದ ತೊಂದರೆಯಿಂದ ಶಿವೈಕ್ಯರಾದರು.
ಪ್ರಸಿದ್ಧ ಗದಿಗೆ ಕುಪ್ಪುರೂ ಮಠದ ಯತೀಶ್ವರ ಸ್ವಾಮೀಜಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಾಗ ಉಸಿರಾಟದ ಸಮಸ್ಯೆಯಿಂದಾಗ ಹೃದಯಾಘತವಾಗಿ ನಿಧನ ಹೊಂದಿದ್ದಾರೆ ಎಂದು ತಿಳಿದುಬಂದಿದೆ.
- Advertisement -