Saturday, July 5, 2025
Homeಕರಾವಳಿಉಳ್ಳಾಲ: ಅಪರಿಚಿತನಿಂದ ಕ್ರೈಸ್ತ ಧರ್ಮ ಪ್ರಚೋದಿತ ಕರಪತ್ರ ಹಾಗೂ ಪುಸ್ತಕಗಳ ಹಂಚಿಕೆ;ಮತಾಂತರ ಆರೋಪ !

ಉಳ್ಳಾಲ: ಅಪರಿಚಿತನಿಂದ ಕ್ರೈಸ್ತ ಧರ್ಮ ಪ್ರಚೋದಿತ ಕರಪತ್ರ ಹಾಗೂ ಪುಸ್ತಕಗಳ ಹಂಚಿಕೆ;ಮತಾಂತರ ಆರೋಪ !

spot_img
- Advertisement -
- Advertisement -

ಉಳ್ಳಾಲ: ಇಲ್ಲಿನ ಸೋಮೇಶ್ವರದಲ್ಲಿರುವಂತಹ ಉಳ್ಳಾಲ ರೈಲ್ವೇ ನಿಲ್ದಾಣದ ಹಿಂಭಾಗದ 15 ಕ್ಕೂ ಅಧಿಕ ಮನೆಗಳ ಗೇಟುಗಳಲ್ಲಿ ಅಪರಿಚಿತ ವ್ಯಕ್ತಿಯೋರ್ವ ಧರ್ಮದ ಬಗ್ಗೆ ಪ್ರಚೋದಿಸುವಂತಹ ಭಿತ್ತಿ ಪತ್ರ ಹಾಗೂ ಪುಸ್ತಕಗಳನ್ನು ಇಟ್ಟಿರುವ ಘಟನೆಯು ಶುಕ್ರವಾರದಂದು ನಡೆದಿದೆ.

ಇಂದು ಬೆಳಗ್ಗೆ ಲುಂಗಿ ಧರಿಸಿದ್ದ ವ್ಯಕ್ತಿಯೊಬ್ಬ ಈ ಪ್ರದೇಶಕ್ಕೆ ಆಗಮಿಸಿದ್ದು ಕ್ರೈಸ್ತ ಧರ್ಮ ಪ್ರಚೋದಿತ ಮಳಯಾಲಂ ಮತ್ತು ಕನ್ನಡದಲ್ಲಿ ಮುದ್ರಿತ ಕರಪತ್ರ, ಪುಸ್ತಕಗಳನ್ನು ಇಟ್ಟು ಹೋಗಿದ್ದಾನೆ. ಸೋಮೇಶ್ವರದ ಬೀಚ್ ರಸ್ತೆಯಲ್ಲಿರುವ 15ಕ್ಕೂ ಹೆಚ್ಚು ಮನೆಗಳ ಹೊರಭಾಗ ಮತ್ತು ಗೇಟಲ್ಲಿ ಪುಸ್ತಕದ ಕಟ್ಟನ್ನು ಇಟ್ಟು ಹೋಗಿದ್ದಾನೆ. ಇದೇ ವೇಳೆ, ಸ್ಥಳೀಯ ವ್ಯಕ್ತಿಯೊಬ್ಬರು ಆತನಲ್ಲಿ ಸೇಲ್ಸ್ ಮೆನ್ ಎಂದುಕೊಂಡು ಮಾತನಾಡಿದ್ದು ಆತ ಕೊಟ್ಟ ಪುಸ್ತಕಗಳನ್ನು ನಿರಾಕರಿಸಿದ್ದಾರೆ. ಆದರೂ ಅವರ ಗೇಟಲ್ಲಿ ಪುಸ್ತಕ, ಸ್ಟಿಕ್ಕರ್, ಕರಪತ್ರಗಳನ್ನ ಇರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.

ಈ ಘಟನಾ ಸ್ಥಳಕ್ಕೆ ಉಳ್ಳಾಲ ಬಜರಂಗದಳ ಘಟಕವು ಭೇಟಿ ನೀಡಿ ಭಿತ್ತಿ ಪತ್ರಗಳನ್ನು ತಮ್ಮ ವಶಕ್ಕೆ
ತೆಗೆದುಕೊಂಡಿದ್ದು, ಅದರಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಲು ಪ್ರಯತ್ನಿಸುತ್ತಿದ್ದಾರೆ.ಮತಾಂತರ ನಡೆಸುವ ಉದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ ಅನ್ನುವ ಆರೋಪವನ್ನು ಸ್ಥಳಿಯರು ಮಾಡಿದ್ದು, ಸ್ಥಳದಲ್ಲಿ ಉಳ್ಳಾಲದ ಬಜರಂಗದಳದ ಕಾರ್ಯಕರ್ತರು ಜಮಾಯಿಸಿದ್ದಾರೆ. ಉಳ್ಳಾಲ ಠಾಣಾ ಪೊಲೀಸರಿಗೂ ಇದರ ಬಗ್ಗೆ ಮಾಹಿತಿ ನೀಡಲಾಗಿದೆ

- Advertisement -
spot_img

Latest News

error: Content is protected !!