- Advertisement -
- Advertisement -
ಕಾರ್ಕಳ: ಉಪನ್ಯಾಸಕಿಯಾಗಿ ವೆಂಕಟರಮಣ ಮಹಿಳಾ ಕಾಲೇಜಿನಲ್ಲಿ ಸೇವೆಸಲ್ಲಿಸಿದ್ದ ಮಮತಾ ಶೆಟ್ಟಿ. ಆರ್ (42) ಪೆರ್ವಾಜೆಯ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪೆರ್ವಾಜೆಯಲ್ಲಿ ವಾಸವಿರುವ ಮಮತಾ ಅವರು, ಮೂಲತಃ ತೆಳ್ಳಾರಿನವರು. ಸೋಮವಾರದಂದು ಬೆಳಗ್ಗೆ ಮನೆಯ ಫ್ಯಾನ್‌ಗೆ ಚೂಡಿದಾರದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಕಾಲೇಜಿನ ನಾಯಕಿಯಾಗಿ ಎಸ್.ಎಫ್.ಐ ಸಂಘಟನೆಯಲ್ಲಿ ಗುರುತಿಸಿ ವಿದ್ಯಾರ್ಥಿ ಚಳುವಳಿಗಳಲ್ಲಿ ಇವರು ಸಕ್ರಿಯಾರಾಗಿದ್ದರು.
ಮಧುಮೇಹ ಹಾಗೂ ಮಾನಸಿಕವಾಗಿ ಖಿನ್ನತೆಯೇ ಆತ್ಮಹತ್ಯೆಗೆ ಕಾರಣವೆನ್ನಲಾಗಿದೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ
- Advertisement -