- Advertisement -
- Advertisement -
ಉಳ್ಳಾಲ: ವಿದ್ಯಾರ್ಥಿಯೋರ್ವ ಚಲಾಯಿಸುತ್ತಿದ್ದ ಕಾರು ಡಿವೈಡರ್ ಗೆ ನೆಗೆದು ಪಲ್ಟಿಯಾದ ಘಟನೆ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆ ಬಳಿ ಸೋಮವಾರ ನಡೆದಿದೆ.
ದೇರಳಕಟ್ಟೆಯ ಕಣಚೂರು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಯಾದ ತೇಜಸ್ ಎಂಬಾತ ಚಲಾಯಿಸುತ್ತಿದ್ದ ರಿಟ್ಸ್ ಕಾರು ಪಲ್ಟಿ ಆಗಿದೆ. ಕಾರು ಚಾಲಕನ ಅತಿವೇಗದ ಚಾಲನೆಯಿಂದಾಗಿ ದೇರಳಕಟ್ಟೆಯತ್ತ ಧಾವಿಸುತ್ತಿದ್ದ ರಿಟ್ಸ್ ಕಾರು ರಸ್ತೆ ಮಧ್ಯದ ವಿಭಾಜಕ ಏರಿ ಪಲ್ಟಿ ಹೊಡೆದಿದೆ.
ಕಾರು ಚಾಲಕ ತೇಜಸ್ ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದು, ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಎಎಸ್‌ಐ ಆಲ್ಬರ್ಟ್ ಲಸ್ರಾದೊ ಪರಿಶೀಲನೆ ನಡೆಸಿದ್ದು ಚಾಲಕನ ಅಜಾಗೂರುಕತೆ ವಿರುದ್ಧ ಪ್ರಕರಣ ದಾಖಲಿಸದೆ ಬಿಟ್ಟಿದ್ದಾರೆ.
- Advertisement -