Wednesday, July 2, 2025
Homeಕರಾವಳಿಮಂಗಳೂರು: ವಿವಾದಾತ್ಮಕ ಹೇಳಿಕೆ ಪ್ರಕರಣ; ಕ್ಷಮೆಯಾಚಿಸಿದ ಹಿಂದೂ ಮಹಾ ಸಭಾ ಮುಖಂಡ

ಮಂಗಳೂರು: ವಿವಾದಾತ್ಮಕ ಹೇಳಿಕೆ ಪ್ರಕರಣ; ಕ್ಷಮೆಯಾಚಿಸಿದ ಹಿಂದೂ ಮಹಾ ಸಭಾ ಮುಖಂಡ

spot_img
- Advertisement -
- Advertisement -

ಮಂಗಳೂರು: ಅಖಿಲ ಭಾರತೀಯ ಹಿಂದೂ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧಮೇಂದ್ರ
ಅವರು ನಿನ್ನೆ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಗಾಂಧೀಜಿ ಅವರ ಹಿಂದುತ್ವದ ವಿರೋಧ ನೀತಿ ಬಗ್ಗೆ ನಾನು ಮಾತನಾಡಿದ್ದೇನೆ ಹೊರತು ಯಾರಿಗೂ ಬೆದರಿಕೆ ಹಾಕಿಲ್ಲ ಎಂದಿದ್ದಾರೆ.

ನನ್ನ ನೀಡಿರುವ ಹೇಳಿಕೆಯಲ್ಲಿ ಹತ್ಯೆ ಎಂಬ ಶಬ್ದವು ಅಸಂವಿಧಾನಿಕವಾಗಿದ್ದರೆ ಆ ವಿಚಾರವಾಗಿ ನಾನು ಕ್ಷಮೆ ಕೇಳುತ್ತೇನೆ. ಧರ್ಮದ ರಕ್ಷಣೆಗೆ ಹಿಂದೂ ಮಹಾಸಭಾ ಯಾವಾಗಲೂ ನಿಲ್ಲುತ್ತದೆ ಎಂಬುದು ನನ್ನ ಮಾತಿನ ಅರ್ಥ ಎಂದು ಹೇಳಿದ್ದಾರೆ.

ಹಿಂದೂಗಳ ಮೇಲೆ ದಾಳಿ ಆದಾಗ ಗಾಂಧಿಯನ್ನೇ ಬಿಟ್ಟಿಲ್ಲ. ಇನ್ನು ನಿಮ್ಮನ್ನು ಬಿಡುತ್ತೇವಾ?. ಬಿಜೆಪಿ ಒಂದು ಬೆನ್ನುಮೂಳೆ ಇಲ್ಲದ ಸರ್ಕಾರ. ಇವರಿಗಿಂತ ತಾಲಿಬಾನ್‌‌ಗಳು ವಾಸಿ. ಇವರ ಸರ್ಕಾರ ತಾಲಿಬಾನ್‌‌ಗಳಿಗಿಂತ ಕೀಳು ಎನ್ನುವ ಹೇಳಿಕೆಯನ್ನು ಸುದ್ದಿಗೋಷ್ಠಿಯಲ್ಲಿ ಧರ್ಮೇಂದ್ರರವರು ನೀಡಿದ್ದರು.

ಇಲ್ಲಿ ಸಂಸದರು ಶಾಸಕರು ಬಾಲಿಷ ಉತ್ತರ ನೀಡುತ್ತಾರೆ. ಇಲ್ಲಿ ಬಿಜೆಪಿ ಅಲ್ಪಸಂಖ್ಯಾತರ ಮತ ಓಲೈಕೆಗೆ ಮುಂದಾಗಿದೆ. ದೇವಾಲಯ ಧ್ವಂಸದ ಮೂಲಕ ಅಲ್ಪಸಂಖ್ಯಾ ಮತಗಳಿಕೆಗೆ ಮುಂದಾಗಿದೆ. ಇವರ ವಿರುದ್ದ ಹಿಂದೂ ಮಹಾ ಸಭಾ ಮುಂದಿನ ಚುನಾವಣೆವರೆಗೆ ಹೋರಾಟ ಮಾಡುತ್ತೆ ಎಂದು ಹೇಳಿದ್ದರು.

- Advertisement -
spot_img

Latest News

error: Content is protected !!