Saturday, June 6, 2026
Homeಇತರಉದನೆ: ತೂಗುಸೇತುವೆಯಲ್ಲಿ ಪುರುಷರ 1 ಜೊತೆ ಚಪ್ಪಲ್ ಹಾಗೂ ಬ್ಯಾಗ್ ಪತ್ತೆ...! ಯಾರೋ ನದಿಗೆ ಹಾರಿರುವ...

ಉದನೆ: ತೂಗುಸೇತುವೆಯಲ್ಲಿ ಪುರುಷರ 1 ಜೊತೆ ಚಪ್ಪಲ್ ಹಾಗೂ ಬ್ಯಾಗ್ ಪತ್ತೆ…! ಯಾರೋ ನದಿಗೆ ಹಾರಿರುವ ಶಂಕೆ

- Advertisement -
- Advertisement -

ಕಡಬ ತಾಲೂಕಿನ ಉದನೆಯ ತೂಗುಸೇತುವೆಯಲ್ಲಿ ಪುರುಷರ 1 ಜೊತೆ ಚಪ್ಪಲ್ ಹಾಗೂ ಬ್ಯಾಗ್ ಪತ್ತೆಯಾಗಿದ್ದು ಯಾರೋ ನದಿಗೆ ಹಾರಿರುವ ಶಂಕೆ ವ್ಯಕ್ತಗೊಂಡಿದೆ.

ಮುಂಜಾನೆ ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು ನೆಲ್ಯಾಡಿ ಹೊರಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಬ್ಯಾಗ್ ನಲ್ಲಿ ಗುರುತು ಚೀಟಿ ಪತ್ತೆಯಾಗಿದ್ದು ಪುಟ್ಟಪರ್ತಿ ನಿವಾಸಿ ಎಂದು ಹೇಳಲಾಗಿದೆ. ಅಲ್ಲದೇ ಡೆತ್ ನೋಟ್ ಹಾಗೂ ಧರ್ಮಸ್ಥಳದಿಂದ ಉದನೆಗೆ ಮಾಡಲಾಗಿದ್ದ ಬಸ್ ಟಿಕೆಟ್ ಸಹ ಬ್ಯಾಗ್ ನಲ್ಲಿ ಪತ್ತೆಯಾಗಿದೆ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

- Advertisement -

Latest News

error: Content is protected !!