Sunday, June 7, 2026
Homeಕರಾವಳಿಬಿ.ಸಿ.ರೋಡ್: ಅಜ್ಜಿಬೆಟ್ಟು ಶಾಲೆಯಲ್ಲಿ ಕೋವಿಡ್-19 ಜನಜಾಗೃತಿ ಹಾಗೂ ಲಸಿಕಾ ವಿತರಣೆ ಕಾರ್ಯಕ್ರಮ

ಬಿ.ಸಿ.ರೋಡ್: ಅಜ್ಜಿಬೆಟ್ಟು ಶಾಲೆಯಲ್ಲಿ ಕೋವಿಡ್-19 ಜನಜಾಗೃತಿ ಹಾಗೂ ಲಸಿಕಾ ವಿತರಣೆ ಕಾರ್ಯಕ್ರಮ

- Advertisement -
- Advertisement -

ಬಂಟ್ವಾಳ: ನೆಹರು ಯುವ ಕೇಂದ್ರ ಮಂಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರ ಆರೋಗ್ಯ ಕೇಂದ್ರ ಬಂಟ್ವಾಳ,ಮತ್ತು ಸ್ನೇಹಾಂಜಲಿ ಸೇವಾ ಸಂಘ (ರಿ)ಅಜ್ಜಿಬೆಟ್ಟು,ಬಿ.ಸಿ.ರೋಡ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಕೋವಿಡ್-19 ಜನಜಾಗೃತಿ ಕಾರ್ಯಕ್ರಮ ಹಾಗೂ ಲಸಿಕೆ ವಿತರಣೆ ಕಾರ್ಯಕ್ರಮ ಇಂದು ಬಿ.ಸಿ.ರೋಡಿನ ಅಜ್ಜಿಬೆಟ್ಟು ಶಾಲೆಯಲ್ಲಿ ನಡೆಯಿತು.

ಬಂಟ್ವಾಳ ತಾಲೂಕಿನ ಮಾನ್ಯ ಶಾಸಕರಾದ ಶ್ರೀ ರಾಜೇಶ್ ನಾಯಕ್ ಉಳಿಪಾಡಿಗುತ್ತು ಇವರು ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.

ನಗರ ಆರೋಗ್ಯಕೇಂದ್ರ ಆರೋಗ್ಯಾಧಿಕಾರಿಯಾದ ಅಶ್ವಿನಿ , ಅಕ್ಷತಾ ಹಾಗೂ ಸಿಬ್ಬಂದಿಗಳು ಮತ್ತು
ನೆಹರು ಯುವ ಕೇಂದ್ರ ಮಂಗಳೂರು ಇದರ ಜಿಲ್ಲಾ ಯುವ ಸಮನ್ವಯಧಿಕಾರಿ ರಘವೀರ್ ಸೂಟರ್ ಪೇಟೆ, ತಾಲೂಕು ಯುವ ಸಂಯೋಜಕ ಆಶಿಶ್ ಅಜ್ಜಿಬೆಟ್ಟು ಹಾಗೂ ಸ್ನೇಹಾಂಜಲಿ ಸೇವಾ ಸಂಘದ ಪ್ರಮುಖರಾದ ಸದಾನಂದ ರಂಗೋಲಿ, ರಾಜೇಶ್, ನಾಗೇಶ್ ಅಜ್ಜಿಬೆಟ್ಟು, ಗೋಪಾಲ ಸುವರ್ಣ, ಪ್ರಮೋದ್ ಅಜ್ಜಿಬೆಟ್ಟು, ಜಯಂತ್ ಅಗ್ರಬೈಲ್, ಕೇಶವ ದೈಪಲ, ಪ್ರದೀಪ್ ಅಜ್ಜಿಬೆಟ್ಟು, ಪ್ರಣಮ್ ಅಜ್ಜಿಬೆಟ್ಟು, ಪ್ರಶಾಂತ್ ಅಜ್ಜಿಬೆಟ್ಟು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


- Advertisement -

Latest News

error: Content is protected !!